ಆಸೆಯ ಕಣ್ಣುಗಳು ಕಾಯುತ್ತಿವೆ. ಅಲ್ಲಿ ಪ್ರತಿದಿನ ಸಂಭ್ರಮವಾಗಲೆಂಬ ಹಾರೈಕೆ ಅವರದು. ಹೊಸ ಮುಖಗಳನ್ನು ನೋಡುವ ಆಸೆ ಆ ಮುಖಗಳಲ್ಲಿ ತಮ್ಮ ಅಣ್ಣ, ಅಪ್ಪ ಅಮ್ಮ ಬಂದು ಬಳಗ ಎಲ್ಲರನ್ನ ಹತ್ತಿರ ಕರೆದು ಮಾತನಾಡುವ ಭ್ರಮೆ. ಇಲ್ಲಿಗೆ ಮುಖಗಳು ಸಂಭ್ರಮಕ್ಕೂ ಪ್ರಸಿದ್ಧಿಗೋ, ಸಮಾಧಾನಕೊ ಬರುತ್ತಾವೆ. ಅಲ್ಲಿ ಬದುಕುತಿದ್ದ ಎಲ್ಲರೂ ಅವರನ್ನು ತೊರೆದ ಮೇಲೆ ಈ ಆಶ್ರಯ ಸ್ಥಳಕ್ಕೆ ಬಂದುಬಿಟ್ಟಿದ್ದಾರೆ. ಪ್ರತಿದಿನ ಪ್ರತಿದಿನವೂ ನೋವಿನ ನಡುವೆ ಕಥೆಗಳನ್ನು ಉಳಿಸಿಕೊಂಡವರು ಆ ಕಥೆಗಳನ್ನು ಹೇಳುವುದಕ್ಕೆ ಕಾಯುತ್ತಿದ್ದಾರೆ. ಪ್ರತಿ ವೃದ್ಧಾಶ್ರಮದ ಕಥೆ ಇಷ್ಟೇ ಬದುಕಿನ ಆಸೆಗಳನ್ನು ಕಳೆದುಕೊಂಡು ಭಗವಂತ ಕೊಂಡೊಯ್ಯುವವರೆಗೂ ಬದುಕಬೇಕೆನ್ನುವ ಕಾರಣಕ್ಕೆ ದಿನದೊಡುವವರವರು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!