ಸರಕಾರಿ ಬಸ್ಸಿನಲ್ಲಿ ಇಬ್ಬರ ಪಯಣ . ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ. ಒಬ್ಬನಿಗೆ ಈ ಪಯಣ ತುಂಬಾ ಹೊಸದು. ಪ್ರತಿದಿನವೂ ತನ್ನದೇ ಸ್ವಂತ ಗಾಡಿಯಲ್ಲಿ ತಿರುಗಾಡುವವನು, ಈ ದಿನ ಅನಿವಾರ್ಯ ಕಾರಣಕ್ಕೆ ಈ ಸರಕಾರಿ ಬಸ್ಸನ್ನ ಏರಬೇಕಾಗಿತ್ತು. ಆತನಿಗೆ ಪಯಣ ಒಂದು ಚೂರು ರುಚಿಸುತ್ತಿಲ್ಲ. ಆತನ ದೇಹದಲ್ಲಿ ಧರಿಸಿರುವ ಬಟ್ಟೆಗಳು ಚಪ್ಪಲಿಗಳೆಲ್ಲವೂ ಇನ್ನೊಬ್ಬನಿಗೆ ಕನಸಾಗಿ ಉಳಿದುಬಿಟ್ಟಿದೆ. ಆತನ ಪಯಣ ಪ್ರತಿದಿನವೂ ಇದೇ ಬಸ್ಸಿನಲ್ಲಿ ಆತ ಹೊರ ಜಗತ್ತನ್ನ ಗಮನಿಸುವುದನ್ನು ಬಿಟ್ಟು ತನ್ನೆದುರು ಕುಳಿತವನ್ನು ನನಗಿಂತ ಬದುಕು ಯಾವಾಗ ದೊರಕಬಹುದು ಅಂತ ಯೋಚಿಸುತ್ತಿದ್ದಾನೆ. ಇಬ್ಬರೂ ಕ್ಷಣವನ್ನ ಆನಂದಿಸ್ತಾ ಇಲ್ಲ ಇನ್ನೊಬ್ಬರನ್ನು ಕಂಡು ಹಾಗಿರಬೇಕಿತ್ತು ಇರಬಾರದಿತ್ತು ಅಂದುಕೊಂಡು ಸಮಯ ಕಳೆಯುತ್ತಿದ್ದಾರೆ. ಭಗವಂತ ಪ್ರತಿಯೊಬ್ಬರಿಗೂ ದಾರಿ ಮಾಡಿ ಕೊಟ್ಟಿರುತ್ತಾನೆ. ಸಾಗಬೇಕು ಗುರಿ ತಲುಪಬೇಕು ಕ್ಷಣವನ್ನು ಆನಂದಿಸುವುದಷ್ಟೇ ನಮ್ಮ ಕೆಲಸ ಎಲ್ಲವೂ ನಮ್ಮನ್ನು ಹುಡುಕಿ ಬರುತ್ತದೆ. ಇಬ್ಬರಿಗೂ ಅರ್ಥವಾಗಲೇ‌ ಇಲ್ಲ ಈ ಸತ್ಯ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ