ಮನೆಯೊಳಗಿನ ರಾವಣನ 

ಪ್ರತಿಮೆಗಳ ತರಬಹುದು 

ಹೊರಗೆ ಹೇಗಾದರೂ 

ತಲೆ ಬಗ್ಗಿಸಿಯೋ ಅಥವಾ 

ಹೆಗಲ ಹೊರೆಯ ತಗ್ಗಿಸಿಯೋ 

ಅಂತೂ ಇಂತೂ ದಾಟಿಸಬಹುದು 

ಮುಂಬಾಗಿಲ ಚೌಕಟ್ಟಿನಾಚೆಗೆ 

ಹೊಸಿಲ ದಾಟಿಸಿ ತರಬಹುದು;

 

ಆದರೆ ಹೊರಗೆಳೆಯಲಾದೀತೇ 

ಮನದೊಳಡಗಿದ ಅರಿಷಡ್ವೈರಿಗಳೆಂಬ 

ದಶಕಂಠನ ದಶಮುಖಗಳ 

ಕಳಚಲಾದೀತೇ, ಮನುಜರ 

ಮುಖವಾಡಗಳ ಹಲವು 

ನಾಟಕಗಳ ಬಯಲಿಗೆಳೆಯಲಾದೀತೇ 

ಮನೋನಿಗ್ರಹವ ಸಂಯಮವ 

ಸಾಧಿಸಲು ಅಪ್ಪಿಕೊಳಲು 

ಬದುಕು ಬಂದಂತೆಯೇ 

ಇದ್ದಂತೆಯೇ ಒಪ್ಪಿಕೊಳಲು

 

-ಶಾಂತಲಾ ರಾಜಗೋಪಾಲ್‌ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ