ಓ ಮೋಡವೇ ನೀನು ಭುವಿಗೆ ಬರುವ ಮುನ್ನ 

ಬದುಕು ಮೂರಾಬಟ್ಟೆ ಆಗದಿರಲಿ ಎನ್ನ 

ನೋಡು ನೋಡುತ್ತಿದ್ದಂತೆ ಬಿದ್ದ ಹನಿ 

ಹಾಗೇ ಸುಮ್ಮನೆ ಕನವರಿಕೆ ಜೀವನ ಹಾನಿ

 

ಬಿತ್ತನೆ ಮಾಡಿದ ಬದುಕು 

ನಾಳೆ ಕನಸು ನೂಕು 

ಬಯಸಿದ್ದು ಬಂದ ನಂತರ 

ನನಗು ನಿನಗೂ ಅಂತರ

 

ಮತ್ತೆಕೆ ಜಗಳ ಜೂಟಿ 

ನಡೆದು ಬಿಡಲಿ ನಾಳೆ ರಾಜಿ 

ಜಾರುವ ಮುನ್ನ ಹತ್ತಿರದ ನೆರೆಯವರು 

ಬಯಸುವರು ಯೋಗಕ್ಷೇಮ

 

ಆಮೇಲೆ ವಾಪಸ್ ಬೇಕು ಎಂದರೆ 

ಕೊಡವರು ಯಾರು ಬೇಸರಿಸದೆ ಮಾತು 

ನಿಂದು ನಂದು ಬಂಧು ಬಳಗ 

ಅರಿತರೆ ಸಾಕು ಈ ಜಗ 

ಹೊರೆಯಾಗದು ಸಂಸಾರ ನೊಗ.

-ನರಸಿಂಹಪ್ರಸಾದ್ ಎಸ್ ಆರ್. ಕುಣಿಗಲ್

ಚಿತ್ರ ಕೃಪೆ: ಇಂಟರ್ನೆಟ್ ತಾಣ