ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ
ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ
ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ
ನನಸಿನೊಳು ಸಾಗದಿರೆ ಬಾಳ ಒಲುಮೆಯಲಿ ಬೇಯ ಬೇಕೆ
ಧನವೆಲ್ಲ ಬರಿದಾಗೆ ಸಾವು ಸನಿಹಕೆ ಬರುವುದೇ ಗೆಳತಿ
ಬಾಡಿರುವ ಹೃದಯದೊಳು ಮೋಹ ಯಾವತ್ತೂ ಕಾಣುವುದೇ ಹುಡುಕು
ನಡುಗುತಿಹ ತನುವಿಂದ ಪ್ರೀತಿಯ ಪದಗಳು ಸಿಗುವುದೇ ಗೆಳತಿ
ನೊಂದಿರುವ ಆತ್ಮ ಸಖಿ ಎಲ್ಲಿಹಳು ಕೇಳುತಿಹಳು ರತ್ನ
ಕಾರಣವು ಇಲ್ಲದೆಯೇ ಉಸಿರು ಹಾಗೆಯೆ ನಿಲುವುದೇ ಗೆಳತಿ
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!