ಇದೀಗ 'ಕಿಸ್ಮತ ಸೆ ತುಂ ಹಂ ಕೋ ಮಿಲೆ ಹೋ' ಹಾಡನ್ನು ಮೂಲ ಘಾಟಿಯಲ್ಲಿ ಹಾಡಲು ಬರುವಂತೆ ಪೂರ್ತಿ ಅನುವಾದ ಮಾಡಿದ್ದೇನೆ. (ನನ್ನ ಕ್ರಮ ಸಂಖ್ಯೆ 25) ಇದೋ ಇಲ್ಲಿದೆ.

ಪುಣ್ಯದ ಬಲದಿ ಒದಗಿಹೆ ನೀನು ಹೇಗೆ ಬಿಟ್ಟೇನು ಈ ಕೈಯ ಹೇಗೆ ಬಿಟ್ಟೇನು|| ಪ || ಕನಸಿನ ಲೋಕವ ನನಸಾಗಿಸುತ ಭಾಗ್ಯದ ಬಾಗಿಲು ತೆರೆಯುತಲಿರಲು ಹಿಂದಕ್ಕೆ ಸರಿಯುವೆನೇ ನಾನು ಹಿಂದಕ್ಕೆ ಸರಿಯುವೆನೇ ||ಅ.ಪ.||

ಹೇಳಲಿ ಹೇಗೆ ನನ್ನ ಹೃದಯದ ಮೇಲೆ ಬಿದ್ದಿದೆ ನಿನ್ನ ನೆರಳು ದಾರಿಯ ಮರೆತ ಯಾತ್ರಿಕ ತಾನು ಸೇರಿದ ಹಾಗೆ ತನ್ನ ನೆಲೆಯ ಅಥವಾ ಹೃದಯದ ಬಿರುಗಾಳಿಗೆ ಸಿಕ್ಕಿ ದುಃಖದ ಅಲೆಯಲ್ಲಿ ಸಿಕ್ಕ ಹಾಗೆ ಪ್ರೀತಿಯ ನೆಲೆಯನು ಸೇರಿದ ಹಾಗೆ ಸೇರಿ ನಾವು ದುಃಖದ ಚೂರ ಮತ್ತೆ ಜೋಡಿಸುವ ಈ ಚೂರ ಮತ್ತೆ ಜೋಡಿಸುವ || ೧ ||

ನಾಚಿಕೆ ಪಟ್ಟು ಗಾಬರಿಯಿಂದ ಕುಗ್ಗಿದೆ ನಾವು ಈ ತರಹ ಓ ನನ್ನ ನಲ್ಲ ನಾನು ಮರಳಿದೆ ಹೋದ ದಾರಿಯ ಬಿಟ್ಟು ನನ್ನ ಪ್ರೀತಿಯ ಗುರುತಿಸಿದೆ ನನ್ನ ಮಾನವ ಉಳಿಸಿದೆ ನೀ ಈಗ ಹೃದಯಕ್ಕೆ ಎಚ್ಚರ ಬಂದಿತು ಎಚ್ಚರ ಬಂದಿತು ಬಯಕೆಗಳಿಗೆ || ೨ ||