ಬಯಲುಸೀಮೆಯ ಬಟಾಬಯಲಲ್ಲಿ ಎರೆಭೂಮಿಯಲ್ಲಿ ಮಳೆ ಕೈ ಕೊಟ್ಟಾಗ ಜನಜಾನುವಾರುಗಳಿಗೆ ಕುಡಿಯೋಕೆ ನೀರು ಸಿಗೋದೇಕಷ್ಟ ಅಂತದ್ರಲ್ಲಿ ರೈತರು ಅಡಿಕೆತೋಟ ಉಳಿಸಿಕೊಳ್ಳೋಕೆ ಸಾಧ್ಯನಾ?
ಅಡಿಕೆಯ ಆದಾಯ ದೊಡ್ಡದಾಗಿ ಕಾಣಬಹುದು ನಿಜ ಆದ್ರೆ ಅದಕ್ಕಾಗಿ ಸಣ್ಣಹಿಡುವಳಿಯ ಎರೆಡು ಮೂರು ಎಕರೆ ಜಮೀನಿರುವ ರೈತರುಸಹಾ ತಮ್ಮ ಕುಟುಂಬದ ಎಲ್ಲ ಆಸೆ ಆಕಾಂಕ್ಷೆಗಳನ್ನೂ ನಾಲ್ಕೈದುವರ್ಷ ತ್ಯಾಗಮಾಡಿ ಅಡಿಕೆ ನೆಡ್ತಾರೆ, ಆದ್ರೆ ಈ ರೀತಿ ನಿಲುವಲ್ಲಿ ನೀರಿಲ್ಲದೆ ಒಣಗುವ ತೋಟ ಕಂಡಾಗ ಆ ಕುಟುಂಬಗಳಿಗೆ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು...
ದೇವರು ಬಯಲುಸೀಮೆಯಲ್ಲಿ ಏನು ಬೆಳೀಬೇಕು ಅರೇಮಲೆನಾಡಲ್ಲಿ ಮತ್ತು ಮಲೆನಾಡಲ್ಲಿ ಏನು ಬೆಳೀಬೇಕು ಅಂತ ನಿರ್ಧಾರ ಮಾಡಿನೇ ವಾತಾವರಣ ಸೃಷ್ಟಿ ಮಾಡಿರ್ತಾನೆ.
ಹಣ ಹೆಚ್ಚಾದವರು ಏನಾದ್ರೂ ಮಾಡಿಕೊಳ್ಳಲಿ, ಆದ್ರೆ ಮನೆಯವರ ಅನ್ನ, ಬಟ್ಟೆ, ಆರೋಗ್ಯ, ಶಿಕ್ಷಣದ ಆದಾಯಕ್ಕೆ ಅಂತ ಕೃಷಿ ಮಾಡುವ ಬಯಲುಸೀಮೆಯ ಸಣ್ಣರೈತರು ಅಡಿಕೆ ನೆಡುವುದಕ್ಕೆ ಮುಂಚೆ ನೂರು ಸಲ ಯೋಚಿಸಲೇಬೇಕು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!