ಅದೆಷ್ಟು ಜೀವರು ಅದೆಷ್ಟು ಯೋನಿಗಳು .. ಎಣಿಕೆಗೇ ಸಿಗದಷ್ಟು ದೊಡ್ಡ ಜಗವು ।
ಕರ್ಮಾನುಸಾರಿಯು ಮರುಜನ್ಮ ಕಾರಣಕೆ ಹಸುವನ್ನು ಹುಡುಕುವ ಕರುವಿನಂತೆ ।
ಯಾವ ಜೀವವು ಎನಿತು ಜನ್ಮ ಸಾಧಿಸಲಹುದೋ ಅದಲೆಷ್ಟು ಸವೆಸಿ ತಾ ಮರಳಿ ಗಮಿಸುವುದೋ ।
ಪರಮ ಸೂತ್ರದ ಜಾಲ ವಿಹಿತ ಕರ್ಮದ ನಿಯತಿ ಎಲ್ಲ ಜೀವರಿಗಿದುವೆ ಕರ್ಮ ಭೂಮಿ।
ಅಭಿಜಾತವೆಲ್ಲವೂ ಕರ್ಮ ಪಾತ್ರದಿ ಎಸಗಿ ಅಳುಕದೆಯೆ ಪರಮ ಪದ ಕಾಣಲೆಂದು ।
ಕೊನೆಗೊಂದೆ ಜೀವರಿಗೆ ಭೇದವೇ ತಾ ಇರದೆ ಗುರಿಕಾಣಲೊಂದಿದುವೆ "ಜೀವ ಭೂರಂಗ"
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!