ಹಸನಾದ ಪಾತ್ರೆಯಲಿ ಆಗತಾನೆ ಕರೆದ ಆಕಳಿನ ಹಾಲನ್ನು ಪೂರೈಸಿ ತಂದು।
ಒಲೆಯ ಮೇಲದನಿಟ್ಟು ಹದವಾದ ಜ್ವಾಲೆಯಲಿ ಬಿಸಿ ತಟ್ಟಿ ತಪಿಸಲು ಉಕ್ಕುವುದು ಹಾಲು ।
ಉಕ್ಕುವಾ ಮುನ್ನವದು ಉಕ್ಕುತಿಹೆ ನಾನೆಂದು ಸೊರೆದು ಕರೆವುದು ಹಾಲು ಬಿನ್ನಹದಲಿ।
ಕೆನೆ ಹಾಲಿನೊಂದಿಗೆ ಸ್ವಲ್ಪ ಮಧುವನು ಬೆರೆಸಿ ರುಚಿಯಾದ ಪಾನವದು ಆನಂದದ ।
ದೇಹವಿದು ಆ ಪಾತ್ರೆ, ಭಾವವದು ಹಾಲು, ಕರ್ಮ ಭೂಮಿಯೆ ಒಲೆಯು, ಭಕ್ತಿಯದೆ ತಪನ ।
ಭಾವದೋದ್ರೇಕದಲಿ ಸೊರೆದು ಬಿನ್ನವಿಸುತಲಿ ಶರಣಾಗತಿಯ ಕೆನೆಯು ಮೂಡಿದಂತೆ ॥
ಶ್ರಧ್ಧೆಯಾ ಜೇನನ್ನು ಬೆರೆಸಿ ಉಣಿಸಿದರೆ ಶ್ರೀ ಕೃಷ್ಣ ಸವಿಯುವನು ಪ್ರೇಮದಿಂದ ॥
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!