ಅಪ್ಪನ ರಕ್ತವನ್ನು..
ಅಮ್ಮನ ಕಣ್ಣೀರನ್ನು..
ನನ್ನ ಬೆವರನ್ನು..
ಸೇರಿಸಿ ತಯಾರು ಮಾಡಿಕೊಂಡ
ಇಂಕಿನಿಂದ..
ನನ್ನ ಕನಸಿನ ಕೋರ್ಸು ಪ್ರವೇಶ ಪರೀಕ್ಷೆ
ಪ್ರಶ್ನಾ ಪತ್ರವನ್ನು ತುಂಬಿದ್ದೇನೆ.
ಆದರೆ ನನಗೇನು ಗೊತ್ತಿತ್ತು..!
ನನ್ನ ಉತ್ತರಗಳು ಚೆಲ್ಲಿ ಹೋಗಿದೆ ಅಂತೆ..
ಪ್ರಶ್ನಪತ್ರವು ಬೆಲೆ ಕಟ್ಟಿಕೊಂಡು
ಮಾರಾಟವಾಗಿದೆಯಂತೆ..?
* * * * *
ಊರಿನಿಂದ
ಎಷ್ಟೋ ಮೈಲುಗಳ ಆಚೆ
ಲಾಂಗ್ ಟರ್ಮ ಹೆಸರಿನ ಮೇಲೆ ನನಗೆ ನಾನು
ಎಷ್ಟೋ ಪ್ರಶ್ನೆಗಳಿಗೆ ಸಮಾಧಾನವಾಗಿದ್ದೇನೆ
ರಾಂಕ್ ಬಂದರೆ..
ಅಪ್ಪನ ಎದೆಬಡಿತ ವೇಗವನ್ನು ಕೇಳಿಸೋ
ಸ್ಟೆತಸ್ಕೋಪ್ ಆಗಬೇಕೆಂದು ಹಾಗೂ
ಅಮ್ಮನ ಆನಂದಭಾಷ್ಪದ
ಬಿಸಿತನವನ್ನು ಅಳೆಯುವ
ಥರ್ಮಾಮೀಟರ್
ಆಗಬೇಕೆಂದು ನನ್ನ ಕನಸು
* * * * *
ಆದರೆ ಅವತ್ತು ಪರೀಕ್ಷಾ ಕೇಂದ್ರದ ಹೊರಗಡೆ
ನನ್ನ ಕೇಳದೆ
ಅಪ್ಪನ ಗಂಟಲದೊಳಗೆ
ನಿಂತು ಹೋಗಿದ್ದ
“ಈ ಸಲಾ ರಾಂಕ್ ಬರುತ್ತಾ” ಎನ್ನುವ ಪ್ರಶ್ನೆಗೆ
“ಉತ್ತರ ಕಾಣೆ ಯಾಗಿದೆ” ಎಂದು ಹೇಗೆ ಹೇಳಲಿ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!