ಇಂದು ಬಂದಿಹುದು
ನಮ್ಮಲ್ಲರಿಗೆ
ಸಡಗರದ
ಸಂಭ್ರಮದ
ಹೆಮ್ಮೆಯ ದಿನ.....
ಕನ್ನಡನಾಡಿನ ೭೦ ನೆಯ
ಜನುಮದಿನ...
ಉದಯವಾಯಿತು
ನಮ್ಮ ಚೆಲುವ ಕನ್ನಡನಾಡು
೧೯೫೬ ನೇ
ನವಂಬರ ೧ ನೆ ತೇದಿಯಂದು
ಬಿಡುಗಡೆಯ ಪಡೆದು
ಶತಮಾನಗಳ
ಶಾಪದಿಂದ..
ಕನಸುಗಳು ನೂರಾರು
ನನಸಾದವು ಕೆಲವಾರು
ನನಸಾಗದ ಕನಸುಗಳವು
ಬಿತ್ತಿವೆ ಮನದಲಿ
ಉತ್ಸಾದ ಬೀಜವನು
ಆತ್ಮ ವಿಶ್ವಾದ ನೀರರೆಯೆ
ದುಡಿಮೆಯೆಂಬ
ಗೊಬ್ಬರವ ಸೇರಿಸಿದರೆ
ನನಸಾಗುವವು
ನಮ್ಮಲ್ಲರ ಕನಸುಗಳು
ಕರುಣೆ ತೋರುವನು
ಗೆಳೆತನದ ಕಂಪ ಬೀರುವನು
ಕೈಯೆತ್ತಿ ನೀಡುವನು...
ಸಹೃದಯಿ,
ಸದ್ಬುದ್ಧಿ, ಸದ್ವಿಚಾರ,
ಸದಾಚಾರ, ಸತ್ಸಂಗಗಳ
ಸಾಗರವೆ ಆಗಿಹನು
ಕೆಚ್ಚದೆಯ ಕನ್ನಡಿಗನವನು
ಹಾರೈಸುವೆ
ನಿಮಗೆ ಈ
ಕನ್ನಡ ರಾಜ್ಯೋತ್ಸವದಂದು
ಆ ದೇವ ನೀಡಲಿ
ಈಡೇರಿಸಲಿ, ನಿಮ್ಮ ಎಲ್ಲಾ
ಆಸೆ , ಆಕಾಂಕ್ಷೆಗಳನು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!