ನಾವೆಲ್ಲರೂ ಈ ಜಗತ್ತಿನಲ್ಲಿ ಪರಸ್ಪರಅವಲಂಬಿತರಾಗಿದ್ದೇವೆ. (ಒಬ್ಬರನ್ನೊಬ್ಬರು ಅವಲಂಬಿಸಿದ್ದೇವೆ), ನಮ್ಮ ಜೀವನದಲ್ಲಿ ಬಹುತೇಕ ಕೆಲಸಗಳನ್ನು ನಮ್ಮ ಸುತ್ತಮತ್ತಲಿನ ಜನರ ಸಹಕಾರವಿಲ್ಲದೆ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸಹೋದ್ಯೋಗಿಗಳಿರಬಹುದು ಅಥವಾ ನಮ್ಮ ಕುಟುಂಬದ ಸದಸ್ಯರಿರಬಹುದು ಅಥವಾ ನಮ್ಮ ಸಂಬಂಧಿಕರಿರಬಹುದು ಅಥವಾ ನಮ್ಮ ನೆರೆಹೊರೆಯವರಿರಬಹುದು ಅಥವಾ ನಾವು ಪ್ರತಿದಿನ ಸಂವಹನ ನಡೆಸುವ (ಮಾತನಾಡುವ) ಇನ್ನು ಅನೇಕ ಜನರ ಸಹಕಾರವಿಲ್ಲದೆ ಸಾಧ್ಯವಿಲ್ಲ. ಇದನ್ನೇ ಸಹಕಾರದ ಶಕ್ತಿ ಎಂದು ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಯು ಎಷ್ಟೇ ಸಮರ್ಥರಾಗಲಿ, ಎಷ್ಟೇ ಪ್ರತಿಭಾವಂತರಾಗಿರಲಿ, ಎಷ್ಟೇ ದಕ್ಷರಾಗಿರಲಿ ಅಥವಾ ಅಸಾಧಾರಣ ವ್ಯಕ್ತಿಯಾಗಿರಲಿ, ಇತರರ ಸಹಕಾರವಿಲ್ಲದೆ, ಯಾರೂ ಸಹ ತಮ್ಮ ಸ್ವಂತ ಬಲದಿಂದ ತಮ್ಮ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ನಾವು ಪ್ರತಿದಿನ ಜೀವನದಲ್ಲಿ ಕೈಗೊಳ್ಳುವ ಕೆಲಸಗಳನ್ನು ಸಾಧಿಸಲು ಸಾಧ್ಯವಿಲ್ಲ. ಪೋಷಕರು, ಶಿಕ್ಷಕರು ಅಥವಾ ಮಾರ್ಗದರ್ಶಕರ ಸಹಾಯವಿಲ್ಲದೆ ನಾವು ಯಾವುದೇ ಕೆಲಸವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ.
ಉದಾಹರಣೆಗೆ, ಒಬ್ಬ ನಟ ಅಥವಾ ಗಾಯಕನಿಗೆ ಹುಟ್ಟುಗುಣದ ಸೃಜನಶೀಲತೆ ಮತ್ತು ಜನರನ್ನು ರಂಜಿಸುವ ಸಾಮರ್ಥ್ಯವಿದ್ದರೂ ಸಹ, ಯಶಸ್ವಿಯಾಗಿ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು ಸಂಗೀತಗಾರರು, ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ಮುಖ್ಯವಾಗಿ ಪ್ರೇಕ್ಷಕರ ಅಗತ್ಯವಿರುತ್ತದೆ. ಒಂದು ಬ್ಯಾಂಕ್ ಶಾಖೆಯ ಸಿಬ್ಬಂದಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ, ಯಾರು ದಿನದಿಂದ ದಿನಕ್ಕೆ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾರೋ, ಅವರೆಲ್ಲರೂ ಶಾಖಾ ಮುಖ್ಯಸ್ಥರ ನೇತೃತ್ವದಲ್ಲಿ ಎಲ್ಲಾ ತಂಡದ ಸದಸ್ಯರ ಸಹಕಾರವಿಲ್ಲದೆ, ಕನಿಷ್ಠ ಒಂದು ದಿನಕ್ಕಾದರೂ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಬ್ಯಾಂಕ್ ಶಾಖೆಯನ್ನು ನಡೆಸಲು ಸಾಧ್ಯವೇ? ಇತರರ ಕೊಡುಗೆಯನ್ನು ಪ್ರಶಂಸಿಸಲು ಮತ್ತು ಆ ಪ್ರಭಾವಕ್ಕೆ ಮುಕ್ತವಾಗಿರಲು ಸಾಧಿಸುವುದು. ಯಾವಾಗಲೂ ಯಾವುದೇ ಕೆಲಸದ ಈಡೇರಿಕೆಗೆ ಅಥವಾ ಕಾರ್ಯಕ್ಷಮತೆಗೆ ಅನುಕೂಲ ಮಾಡಿಕೊಳ್ಳಬೇಕು. ದೇವತೆಗಳ ಸಹಾಯವಿಲ್ಲದೆ ಸ್ವತಃ ದೇವರೂ ಸಹ ದೈವಿಕ ಕಾರ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಆದ್ದರಿಂದ ನಮ್ಮ ಜೀವನದಲ್ಲಿ ಸಹಕಾರದ ಪರಿಕಲ್ಪನೆ ತುಂಬಾ ಮುಖ್ಯವಾಗಿದೆ. ನಮ್ಮ ಸ್ವಂತ ಸಾಮರ್ಥ್ಯ (ಶಕ್ತಿ) ಮತ್ತು ಬಲಹೀನತೆಗಳು ನಮಗೆ ತಿಳಿಯದ ಹೊರತು, ಹಾಗೆಯೇ ವಿವಿಧ ಕೆಲಸಗಳನ್ನು ಸಾಧಿಸುವಲ್ಲಿ ನಮಗೆ ಸಹಕರಿಸುವ ಜನರ ಸಾಮರ್ಥ್ಯಗಳು ಮತ್ತು ಬಲಹೀನತೆಗಳು ತಿಳಿಯದ ಹೊರತು, ನಿರ್ದಿಷ್ಟ ಸಮಯದಲ್ಲಿ ಆ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ಸಾಧ್ಯವಿಲ್ಲ.
ಈಗ ಪ್ರಶ್ನೆ ಏನೆಂದರೆ? ನಮ್ಮ ಸ್ವಂತ ಸಾಮರ್ಥ್ಯಗಳು ಮತ್ತು ಬಲಹೀನತೆಗಳನ್ನು ನಾವು ಹೇಗೆ ತಿಳಿದುಕೊಳ್ಳುವುದು? ಹಾಗೆಯೇ ನಮ್ಮ ಜೀವನದಲ್ಲಿ ಪ್ರಮುಖರಾದ ಜನರ ಸಾಮರ್ಥ್ಯ ಹಾಗೂ ಬಲಹೀನತೆಗಳನ್ನು ಹೇಗೆ ತಿಳಿಯುವುದು?
ಮೊದಲು ಪಟ್ಟಿ ಮಾಡಿ. ನಿಮ್ಮ ಸ್ವಂತ ಶಕ್ತಿಗಳು ಮತ್ತು ಬಲಹೀನತೆಗಳನ್ನು ಕಾಗದದ ಮೇಲೆ ಬರೆಯಿರಿ. ಮತ್ತು ನಿಮ್ಮಬಲಹೀನತೆಗಳನ್ನು ಹೋಗಲಾಡಿಸಲು ದೀರ್ಘಕಾಲೀನ ಯೋಜನೆಯನ್ನು ಹೊಂದಿರಿ. ನಂತರ ಪ್ರಶ್ನೆ ಬರುವುದು ನಮ್ಮ ಸುತ್ತಮುತ್ತ ಇರುವ ಮತ್ತು ವಿವಿಧ ಕೆಲಸಗಳನ್ನು ಸಾಧಿಸುವಲ್ಲಿ ನಮ್ಮ ಜೀವನದಲ್ಲಿ ಪ್ರಮುಖರಾದ ಜನರ ಸಾಮರ್ಥ್ಯ ಮತ್ತು ಬಲಹೀನತೆಗಳನ್ನು ಅರಿತುಕೊಳ್ಳುವುದು ಹೇಗೆ ಎಂಬ ಬಗ್ಗೆ. ನಿಮ್ಮ ಸ್ವಂತ ಶಕ್ತಿಗಳು ಮತ್ತು ಬಲಹೀನತೆಗಳನ್ನು ಹಾಗೂ ನಿಮ್ಮ ಜೀವನದ ಇತರ ಪ್ರಮುಖ ವ್ಯಕ್ತಿಗಳಬಲ-ಬಲಹೀನತೆಗಳನ್ನು ತಿಳಿದುಕೊಳ್ಳುವುದು ಈ ಕೆಳಗಿನ ದ್ವಿಮುಖ ಪ್ರಕ್ರಿಯೆಯಿಂದ (ಎರಡು ಕಡೆಯ ಪ್ರಕ್ರಿಯೆಯಿಂದ) ಸಾಧ್ಯವಾಗುತ್ತದೆ.
ಅಭಿಪ್ರಾಯವನ್ನು ನೀಡುವುದು ಮತ್ತು ಸ್ವೀಕರಿಸುವುದು (ಫೀಡ್ಬ್ಯಾಕ್ ನೀಡುವುದು ಮತ್ತು ಪಡೆಯುವುದು) ಸರಿ ನನ್ನ ಪ್ರೀತಿಯ ಸ್ನೇಹಿತರೇ, ಈ ನಿರ್ಣಾಯಕ ಪ್ರಕ್ರಿಯೆಯ ಬಗ್ಗೆನಾನು ನನ್ನ ಮುಂದಿನ ಚಿಂತನೆಗಳ ಬರಹದಲ್ಲ ಬರೆಯುತ್ತೇನೆ. ತಾವು ಸ್ವಲ್ಪ ಸಮಯ ಕಾಯಬೇಕಾಗಿ ವಿನಂತಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!