ಕಾಡಿನೊಳಗೊಂದು ಮನೆಯ ಮಾಡಿ

'ಕಾಡಿನೊಳಗೊಂದು ಮನೆಯ ಮಾಡಿ' ಮನುಜರಿಗೆ ಅಂಜಿದೊಡೆ ಎಂತಯ್ಯ? ನನ್ನ ಕಾಡಂಚಿನ 'ಆನೆಮನೆ'ಯ ಅನುಭವಗಳು ನೂರಾರು. ಅಲ್ಲಿ ಮಾಲೇಗೌಡನಕಟ್ಟೆ ಎಂಬ ವಿಸ್ಮಯ ಲೋಕವಿದೆ. ಒಂದು ಮಳೆ ಅಲ್ಲಿ ಸೃಷ್ಟಿಸುವ ಪ್ರಕೃತಿ ನಾಟಕ ಊಹೆಗೂ ನಿಲುಕದ್ದು. 'ಮಂದಣ್ಣ'ನನ್ನು ನೆನಪಿಸುವ ನಮ್ಮ ಮನೆಯ ಕೆಂಪಣ್ಣ. ಆನೆಗಳ ಪಿಸುಮಾತಿನ ಒಳಗುಟ್ಟು. ನಮ್ಮ ಮನೆಯ ಬಾಲ್ಕನಿ ಸೀಟಿನಿಂದ ಕಾಣುವ ನಿಸರ್ಗ ನಾಟಕಗಳು ಪ್ರಕೃತಿ ಆಸಕ್ತರಿಗೆ ಒಂದು ಹಬ್ಬವೇ ಸರಿ.

ಇಂತಹ ಅನೇಕ ಆಸಕ್ತಿಕರ ಸಂಗತಿಗಳ ಜೊತೆಗೆ, ಖಾಸಗಿ ಜಮೀನುಗಳಲ್ಲಿ ಕೂಡ ವನ್ಯಜೀವಿಗಳು ಮತ್ತು ಕಾರಿಡಾರ್ ಗಳ ಸಂರಕ್ಷಣೆ ಮಾಡಬಹುದೇ ಎಂದು ನಾನು ಮಾಡಿದ ಪ್ರಯೋಗದ ವಿಚಾರಗಳನ್ನು ಒಳಗೊಂಡ ಖ್ಯಾತ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಯವರು ಬರೆದ ಪುಸ್ತಕವಿದು.

ಈ ಕೃತಿಯ ಬೆನ್ನುಡಿಯಲ್ಲಿ “ಖಾಸಗಿ ಜಮೀನುಗಳಲ್ಲೂ ಕೂಡ ವನ್ಯಜೀವಿ ಸಂರಕ್ಷಣೆ ಮಾಡಬಹುದು ಎಂದು ತಿಳಿದಿತ್ತೇ?

ಸ್ಥಳೀಯ ಗಿಡಗಳೆಂದರೆ ಏನು?

ಮೊದಲ ಮಳೆಯಿಂದ ವನ್ಯಜೀವಿಗಳ ಜೀವನದಲ್ಲಾಗುವ ಬದಲಾವಣೆಗಳೇನು?
ಮಿಂಚುಹುಳುಗಳು ಬೆಳಕನ್ನು ನಮ್ಮ ಮನೆಗಳಿಗೆ ಹಿಂದಕ್ಕೆ ತರುವುದು ಹೇಗೆ?

ಆನೆಗಳು ಮೊಸಳೆಗಳಿಗೆ ಹೆದರುತ್ತವೆಯೇ?

ಸ್ಥಳೀಯ ಕುರಿಗಾಹಿ ಕರಿಯಪ್ಪನಿಗೆ ಆನೆಗಳ ಬಗ್ಗೆಯಿರುವ ಅಭಿಪ್ರಾಯವೇನು?

ಮಟಪಕ್ಷಿಗೂ ಮೊಲಕ್ಕೂ ಇರುವ ಸಂಬಂಧವೇನು?

ನಿನ್ನು ಮಕ್ಕಳಿಗೆ ತಾರಾಮಂಡಲ ತೋರಿಸಬೇಕೇ?

ನಿಸರ್ಗ ಪ್ರಪಂಚ ಬಹು ಜಟಿಲವಾದ ಕೊಂಡಿಗಳಿರುವ ಬಲೆ, ಅದನ್ನು ನಾವು ಗಮನಿಸದೆ ಹೋಗುತ್ತಿದ್ದೇವೆ. ಆದರೆ ಈ ಜಟಿಲ ಕೊಂಡಿಗಳು ನಿಸರ್ಗದ ಸೂಕ್ಷ ತಕ್ಕಡಿಯನ್ನು ಸಮದೂಗಿಸಲು ಬಹು ಮುಖ್ಯ ವನ್ಯಜೀವಿ ಸಂರಕ್ಷಕನಾಗಿ, ನಂತರ ವನ್ಯಜೀವಿ ವಿಜ್ಞಾನಿಯಾಗಿ ದಶಕಗಳ ಅನುಭವದ ಮೇಲೆ ಸಂಜಯ್ ಗುಬ್ಬಿಯವರು ತಮ್ಮ ಖಾಸಗಿ ಭೂಮಿಯನ್ನು ವನ್ಯಜೀವಿ ಪೂರಕವಾಗಿ ನಿಭಾಯಿಸಿದವರು. ಆನೆಯಂತಹ ದೊಡ್ಡ ಸ್ತನಿಗಳಿಂದ ಮಿಂಚುಹುಳುವಿನಂತಹ ಸಣ್ಣ ವನ್ಯಜೀವಿಗಳ ಸಂರಕ್ಷಣೆ ಮತ್ತು ಅವುಗಳ ಬಗ್ಗೆ ಅವರು ಗಮನಿಸಿರುವ ಚಕಿತಗೊಳಿಸುವ ಅಂಶಗಳು, ಕೆಲ ವನ್ಯಜೀವಿಗಳ ಮಧ್ಯೆಯಿರುವ ತಿಳಿಯದ ಸಂಬಂಧಗಳು ಮತ್ತು ಪ್ರತಿ ಜೀವಿಗೆ ನಿಸರ್ಗದಲ್ಲಿರುವ ಅದ್ಭುತವಾದ ಆದರೆ ವಿಶಿಷ್ಟ ಸ್ಥಾನವನ್ನು ದಾಖಲಿಸಿ ಕಾಡಿನೊಳಗೊಂದು ಮನೆಯ ಮಾಡಿ ಪುಸ್ತಕದ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಏಕಕಾಲಕ್ಕೆ ಕುತೂಹಲ ಉಕ್ಕಿಸುವ, ಅರಿವನ್ನು ವಿಸ್ತರಿಸುವ ಈ ಬರಹ ಸಂಜಯ್‌ ಗುಬ್ಬಿಯವರ ಸ್ವಾನುಭವ ಕಥನ.” ಎಂದು ಮುದ್ರಿಸಲಾಗಿದೆ.