ಕಾಯುತಿಹುದು ಮನಸ್ಸು

ಒಮ್ಮೆ ಹೇಳಿಬಿಡು ನಾ ನಿನ್ನ ಕ್ಷಮಿಸಿರುವೆನೆಂದು

ನೀ ಹೇಳ್ಲಿಲ್ಲವೆಂದರೆ ಮರೆತುಬಿಡು ಆ ನನ್ನ ತಪ್ಪಾ

ಆದರೆ ದ್ವೇಷಿಸಬೇಡ ಉಳಿದ ಜೀವಮಾನವಿಡೀ

ಓಮ್ಮೆ ಅವಕಾಶ ಕೊಡು ನಾ ತಿದ್ದಿ ನಡೆವೆ

ಮನಸ್ಸಿನ ಹುಚ್ಚಾಟಕೆ ಒಮ್ಮೆ ಮೈ ಮರೆತೇ

ಕ್ಷಣದಲ್ಲೇ ತಿಳಿದಿಹುದು ಆ ನನ್ನ ತಪ್ಪು

ಕ್ಷಮಿಸಿ ಬಿಡು ಒಮ್ಮೆ ಮನಸಲ್ಲಾದ್ರೂ

ಅದೇ ಸಾಕೆನಗೆ ನೆಮ್ಮದಿಯ ನಿಟ್ಟುಸಿರು