ಸುಮಾರು 1992 ನೇ ಇಸವಿ ಆದಾಗ ತಾನೇ 4/5 ತರಗತಿಯ ವ್ಯಾಸಂಗ ನಡೆಯುತಿತ್ತು ಹಳ್ಳಿ ಸೊಗಡು, ಕೆರೆ, ಬಾವಿ , ತೊರೆ , ಗದ್ದೆ , ಹಸು ಎಮ್ಮೆ ಎಲ್ಲವು ನಮ್ಮ ಸಂಸ್ಕೃತಿ ಹಾಗು ರೀತಿ ನೀತಿಗಳ ಪ್ರತಿಬಿಂಬವಾಗಿತು, ಆ ದಿನಗಳು ಮೇಲು ಕೀಳು ಜಾತಿ ಎಂಬ ತಾರತಮ್ಯಗಳಲ್ಲೂ ,

ಸೊಗಸಾದ ಜೀವನ, ಹೊಟ್ಟೆಗೆ ಬೇಕಾಗುವಷ್ಟು ಊಟ, ಸಮಯಕೆ ಸರಿಯಾಗಿ ಕೆಲಸ ನಿರ್ವಹಣೆ, ಪಿಸು ಪಿಸು ಅಕ್ಕ ಪಕ್ಕದ ಮನೆಯ ವಿಷಯಗಳು ಚಿಕ್ಕ ಪುಟ್ಟ ಅಸೂಯೆ , ಹೊಟ್ಟೆಕಿಚ್ಚು , ಎಲ್ಲವು ತುಂಬಿದ ಹಳ್ಳಿ ಜೀವನ ಸಾಗುತಿತ್ತು .

ನನಗೆ ಸುಮಾರು 12 ವರ್ಷ ವಯಸ್ಸು, ಭಾನುವಾರ ಶಾಲೆಗೆ ರಾಜ ಇದ್ದದರಿಂದ ಸಾಮಾನ್ಯವಾಗಿ ಎಮ್ಮೆ ಮೇಯಿಸಲು ಹೋಗಬಿಕಿತ್ತು, ಕೆಲವೊಮ್ಮೆ ಧನ ಮೇಯಿಸಲು ನಮ್ಮ ನೆಚ್ಚಿನ ಗೆಳೆಯರಿದ್ದರೆ ಅದು ತುಂಬಾ ಖುಷಿ ಕೊಡುತ್ತಿತ್ತು. ಏಕೆಂದರೆ ಅಲ್ಲಿ ನಮ್ಮದೇ ರಾಜ್ಯ , ನಮ್ಮದೇ ಕೋತಿ ಚೇಷ್ಟೆಯ ಆಟಗಳು.

ಅದೇ ಅಲ್ಲವೇ ಬೇಕಾಗಿರುವುದು ಎಲ್ಲರ ಬಾಲ್ಯದಲ್ಲಿ ..?

ಆಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ . ಇದೆಲ್ಲದರ ನಡುವೆ ಭಾನುವಾರ ಬೇಗ ಮನೆಗೆ ಬರುವ ಆತುರ , ಕಾತುರ , ಕುತೂಹಲ. ಎಮ್ಮೆ ಮೇಯಿಸಿ ಬರುವ ನಮ್ಮ ಮುಖಗಳು ಕೆಸರಿನಿಂದ ತುಂಬಿದ್ದು , ಹೊಟ್ಟೆ ಹಸಿವಿನೊಂದಿಗೆ, ತಂಗಳ ಅನ್ನದ ಜೊತೆಗೆ ಗಟ್ಟಿ ಕೆನೆ ಮೊಸರು

ಅಬ್ಬಬ್ಬಾ ಅದೆಂತ ಅದೃಷ್ಟ ಒಮೆಲ್ಲೆ ತಿಂದು ಮುಗಿಸಿ , ಅಮ್ಮ ಬೇಗ ಬಾರೋ ಸ್ನಾನ ಮಾಡು ಎಂದು ಒಮ್ಮೆಲೇ ಎಳೆದು ತಂದು, ತಲೆಗೆ ಶೀಗೆಕಾಯಿ ಪುಡಿ ಹಾಕಿ ತಲೆ ಉಜ್ಜಿ ಮತ್ತು ಲೈಫ್ ಬಾಯ್ ಸೋಪ್ ಹಾಕಿ ಘಮ್ಮನೆ ರೆಡಿ ಮಾಡಿ ಇವತ್ತು ಭಾನುವಾರ ಟಿವಿ ನೋಡಲು ಹೋಗು ಎಂದು ಕಳಿಸುತ್ತಿದ್ದರು.

ಊರಿಗೆ ಒಂದೋ ಎರಡೂ ಮನೆಗಳಲ್ಲಿ ಮಾತ್ರ ಟಿವಿ (ದೂರದರ್ಶನ) ಇದ್ದ ಕಾಲವದು, ಪಾಪ ಟಿವಿ ಇದ್ದ ಮನೆಯವರಿಗೆ ತುಂಬಾ ಕಿರಿ ಕಿರಿ ಭಾನುವಾರ ಚಲನ ಚಿತ್ರ ಸರಿಯಾಗಿ 4 ಗಂಟೆಗೆ ಬರುತ್ತಿತ್ತು , ಅದನ್ನ ನೋಡಲು ಎಲ್ಲರೂ ಟಿವಿ ಇದ್ದವರ ಮನೆಯಲ್ಲಿ ಜಮಾಯಿಸುತಿದ್ದರು. ದೊಡ್ಡವರು, ಚಿಕ್ಕವರು ಎಲ್ಲರು ಒಟ್ಟಿಗೆ ಸದ್ದಿಲ್ಲದೇ ಬರುವ ಎಲ್ಲ ಜಾಹೀರಾತು ಜೊತೆ ಚಲನ ಚಿತ್ರ ನೋಡಲು ಎಲ್ಲರೂ ನೆರೆಯುತಿದ್ದ ಆ ದಿನಗಳೇ ಮದುರ ನೆನಪು .

ಹೀಗಿರುವಾಗ ಯಾವುದಾದರೂ ಕ್ರಿಕೆಟ್ ಇದ್ದರೆ ಕಥೆ ಮುಗಿಯಿತು. ಆ ದಿನ ಚಲನ ಚಿತ್ರ ಪ್ರಸಾರವಾಗುತಿರಲಿಲ್ಲ , ಎಲ್ಲರು ನಿರಾಶರಾಗಿ ಮನೆಗೆ ಹಿಂತಿರುಗುತಿದ್ದೆವು. ಶುಕ್ರವಾರದ ಚಿತ್ರ ಗೀತೆಗಳು, ಭಾನುವಾರದ ಚಲನಚಿತ್ರ, ಪ್ರತಿದಿನ ಸಾಯಂಕಾಲದ 7 ಗಂಟೆಯ ವಾರ್ತೆಗಳು ಮರೆಯಲಾಗದ ನೆಚ್ಚಿನ ಕಾರ್ಯಕ್ರಮಗಳು .

ಚಿತ್ರ ಸಂಗ್ರಹಣೆ :ಚಾಟ್ ಜಿ ಪಿ ಟಿ