ಕಣ್ಣ ಹನಿಗೆ
ಕಾರಣ ಬೇಕಿಲ್ಲ
ದುಃಖಕ್ಕೂ ಬರುವೆ ನೀ
ಖುಷಿಗೂ ಬರುವೆ ನೀ
ಮನದಾಳದ ಧುಗಡಕ್ಕೂ ಬರುವೆ ನೀ
ಸಂತೋಷದ ಬಾರ ಹೆಚ್ಚಾದಾಗಲೂ ಬರುವೆ ನೀ
ಮಳೆಯಲಿ ನೀ ಬಂದರೆ
ಸಿಗದು ನಿನ್ನ ಸುಳಿವು ಯಾರಿಗೂ
ಮನಸ್ಸಿನ ಮಾತು ಪದಗಳಲ್ಲಿ ಹೇಳಲಾಗದೆ ಕಣ್ಣೀರ ಹನಿಯಾಗಿ ಮೌನದಿ ತನ್ನ ಕಷ್ಟಗಳ ಮರೆಮಾಚಿ
ಕಣ್ಣಂಚಲ್ಲಿ ನೀ ಮರೆಯಾದೆಯಾ...?
ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ
ದೀಪು ಬೆಳ್ಳುಳ್ಳಿ ಮೈಸೂರು
ಪ್ರತಿಕ್ರಿಯೆ (2)
ಹೆಣ್ಣಿನ ಕಣ್ಣಂಚಿನ ಹನಿಗೆ ಕರಗದವರಾರು? ಹೆಂಡತಿಯದಾದರೆ ಪ್ರೀತಿಯ ಆಲಿಂಗನ ಅಮ್ಮನದಾದರೆ ಒಲುಮೆಯ ನೋಟವೆ ಸಾಕು ಮಗಳದಾದರೆ ಒಂದೆರಡು ಮುದ್ದಿನ ಮುತ್ತು ಸೋದರಿಯಾದರೆ ಸಹಾನುಭೂತಿಯ ಮಾತು ದುಃಖವಾಗುವುದು ಮಾಯ, ಖುಷಿಯಾಗುವುದು ಸಮೃದ್ಧಿ.
ಸುರಿಸು ಕಣ್ಣಹನಿಗಳ ನಾಲ್ಕು ನಿನ್ನವರಲ್ಲದ ನಿನ್ನವರಿಗೆ ಸುಖಕೂ ಅಲ್ಲ ದುಃಖಕೂ ಸುಖಾಸುಮ್ಮನೆ ಉದುರಲಿ ನಾಲ್ಕು ಸುರಿಸುವನಾಗ ನೋಡು ಆ ದೇವನು ನಿನಗಾಗಿ ಆನಂದಭಾಷ್ಪ!!