ತಾಯಿ ಭಾರತಿ ಮೆರೆಸಿ ಕೀರುತಿ
ಮಡಿಲ ಕುಡಿಗಳು ತೋರಿ ಸಂಸ್ಕೃತಿ
ಎಲ್ಲರೊಂದೇ ಎನುತ ಕೂಗುತ
ಅಮರರಾದ ನಮ್ಮ ಯೋಧರು
ದೇಶ ರಕ್ಷಣೆ ಧ್ಯೇಯವೆನ್ನುತ
ಗಡಿ ಕಾಯುವ ವೀರರು
ಜಾತಿ ಪಂಥ ಭೇದವಿಲ್ಲವೆನುತ
ಯುವಶಕ್ತಿ ಸಾರಿದ ಕಲಿಗಳು
ಮಳೆ ಬಿಸಿಲು ಚಳಿಗಂಜದ
ಕಾರ್ಗಿಲ್ ನ ನವರತ್ನಗಳು
ದೇಶ ಸೇವೆ ಈಶ ಸೇವೆ
ಎನುತ ಹೇಳುತ ನಡೆದರು
ಅಳಿದ ಸೈನಿಕರ ನೆನೆಯುತ
ಒಂದಾಗಿ ಜೈಹಿಂದ್ ಹೇಳುತ
ಮಾತು ಹಿತಮಿತ ಮೌಲ್ಯವರ್ಧಿತ
ಗುರಿಯ ಗರಿಯ ಗಳಿಸುತ
ತಾನು ಉರಿದು ಬೆಳಕ ತೋರುವ
ದೀಪದಂತೆ ಪ್ರಜ್ವಲಿಸುತ
ಭಾರತಾಂಬೆಯ ಚರಣಕಮಲಕೆ
ಕರವ ಜೋಡಿಸಿ ನಮಿಸುತ
ವೀರತನದಿ ಶತ್ರುಗಳ ಚೆಂಡಾಡುತ
ಶೂರತನದಿ ವಿಜಯಧ್ವಜವನು ನೆಡುತ
ನೆಲಜಲ ನಾಡು ನುಡಿಗೆ ಹೋರಾಡುತ
ದೇಶ ರಕ್ಷಣೆ ನಮ್ಮದೆಂದು ಸಾರಿ ಸಾರಿ ಹೇಳುತ
-ರತ್ನಾ ಕೆ ಭಟ್ಟ,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!