ಸುಮಧುರ ಸಿರಿಕಂಠದ ಜಾನಕಮ್ಮನವರು
ಸಿನಿಲೋಕದ ಹಿನ್ನೆಲೆ ಗಾಯಕಿಯಾದಿರಿ
ಕನ್ನಡ ಚಿತ್ರರಂಗದ ಗಾನವಿಶಾರದೆಯಾದಿರಿ
ಹದಿನೇಳು ಭಾರತೀಯ ಭಾಷೆಯಲಿ ಹಾಡಿದಿರಿ
ಗೆಜ್ಜೆಪೂಜೆ,ಹುಡುಗಾಟದ ಹುಡುಗಿ ಎರಡು ಕನಸು
ಮನಮೋಹಕ ಧ್ವನಿಯ ಭಾಂಡವಾದಿರಿ
ಕಿವಿಗಿಂಪು ಹೃದಯತಟ್ಟಿದ ಶಾಶ್ವತ ಸ್ಥಾನ
ಗಾನಕೋಗಿಲೆ ಚೆಲುವ ಶೈಲಿ ತಾಳ ಮೇಳ
ಸಂಗೀತ ಲೋಕದ ಧ್ರುವತಾರೆಯ ಬೆಳಕು
ಹಲವಾರು ರಾಜ್ಯ ಪ್ರಶಸ್ತಿಗಳ ಕಿರೀಟ
ರಾಷ್ಟ್ರ ಪುರಸ್ಕಾರಗಳು ಬಗಲಿಗೆ
ಹೃದಯ ಗುಡಿಯೊಳಗೆ ಮನೆ ಮಾಡಿದವರು
ಶೋತೃಗಳ ಮನಮೆಚ್ಚಿದ ಸಂಗೀತ ವರ್ಷಾಧಾರೆ
ಗೌರವ ಡಾಕ್ಟರೇಟ್ ಶಿರಕೇರಿಸಿದ ಧೀರೆ
ಇಂಪು ಸೊಂಪು ಕಂಪುಗಳ ಸಮ್ಮಿಲನ
ಎಲ್ಲರ ಮನದ ಗಾನ ಶಾರದೆಗೆ ನಮನ
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!