ಮಾಂಸ ಪ್ರಿಯರಿಗೆ ಇದು ತುಂಬಾ ಇಷ್ಟವಾಗುವ ಶೀರ್ಷಿಕೆ. ಈ ಶೀರ್ಷಿಕೆಯ ಬಗ್ಗೆ ನನಗೆ ತಿಳಿದಿರುವ ಮಾಹಿತಿ ಕೊಡುವ ಒಂದು ಪ್ರಯತ್ನ. ಸಾಮನ್ಯವಾಗಿ ಹಳ್ಳಿಯಲ್ಲಿ ವಾಸವಿರುವರಿಗೆ ಇದರ ಬಗ್ಗೆ ಹೆಚ್ಚು ತಿಳಿದಿರುತ್ತದೆ.

ಹಳ್ಳಿಗಳಲ್ಲಿ ಪಿತೃ ಪಕ್ಷ , ದೀಪಾವಳಿ, ಯುಗಾದಿ , ಈ ಹಬ್ಬಗಳಲ್ಲಿ ವಸತಡುಕು (ಮಾಂಸದೂಟ ) ಸರ್ವೇ ಸಾಮಾನ್ಯ. ಹೀಗಾಗಿ ಹಳ್ಳಿಗಳಲ್ಲಿ ಮೇಕೆ ಹಾಗು ಕುರಿ ಮಾಂಸವನ್ನೇ ಜಾಸ್ತಿ ಇಷ್ಟಪಡುತ್ತಾರೆ. ಹಾಗಾಗಿ ೧೫-೨೦ ಜನರ ಗುಂಪು ಸೇರಿ ಮಾಂಸದ ಚೀಟಿ ನಡೆಸುತಿದ್ದರು (ಚಿಟ್ ಫಂಡ್ ) ಪ್ರತಿಯೊಬ್ಬರು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಸದಾಯ ಮಾಡಿ, ಅದೇ ಹಣವನ್ನು ಅವರ ಗುಂಪಿನಲ್ಲಿಯೇ ಬಡ್ಡಿ ಕೊಡಲಾಗುತ್ತಿತ್ತು. ಅವಶ್ಯಕತೆ ಇದ್ದವರು ತೆಗೆದುಕೊಂಡು ಅಸಲಿ ಮತ್ತು ಬಡ್ಡಿಯನ್ನು ನಿಗದಿಪಡಿಸಿದ ತಿಂಗಳಿನ ದಿನಾಂಕಕ್ಕೆ ಸರಿಯಾಗಿ ಮರುಪಾವತಿ ಮಾಡ್ಬೇಕಿತ್ತು. ಈ ರೀತಿ ಮಾಡುವುದರಿಂದ ಅವರು ಯೋಜನೆ ಮಾಡಿದ ಹಬ್ಬಕೆ, ಈ ಒಟ್ಟು ಮಾಂಸದ ಚೀಟಿ ಹಣದಿಂದ ಮೇಕೆ ಅಥವಾ ಕುರಿಯನ್ನು ಕೊಂಡುಕೊಳ್ಳಲಾಗುತ್ತಿತ್ತು.

ಆ ಹಬ್ಬಕ್ಕೆ ಗುಂಪಿನ ಎಲ್ಲ ಸದಸ್ಯರು ಸೇರಿ ಮಾಂಸವನ್ನು ಸಿದ್ದಗೊಳಿಸುವ ಪ್ರಕ್ರಿಯೆಯನ್ನು ಹಬ್ಬದ ಮಾರನೆಯ ದಿನ ಆರಂಭಿಸುತ್ತಿದ್ದರು, ಗುಂಪಿನ ಪ್ರತಿ ಸದಸ್ಯರು ಹಾಜರಿ ಹಾಗಬೇಕಿತ್ತು. ಯಾರಾದರೂ ತಪ್ಪಿಸಿಕೊಂಡರೆ ಅವರಿಗೆ ದಂಡವನ್ನು ಹಾಕಲಾಗುತ್ತಿತ್ತು. ಎಲ್ಲರು ಒಟ್ಟಾಗಿ ಸೇರಿ ಮಾಂಸ ಸಿದ್ದಪಡಿಸಬೇಕಿತ್ತು. ಕೆಲವೊಬ್ಬರು ಮಾಂಸ ಕತ್ತರಿಸುವ ಪ್ರಕ್ರಿಯೆಯಲ್ಲಿ ಇದ್ದಾರೆ. ಕೆಲವರು ತಲೆ ಹಾಗು ಕಾಲನ್ನು ಬೆಂಕಿಯಲ್ಲಿ ಸುಟ್ಟು ಸ್ವಚ್ಛಗೊಳಿಸುತಿದ್ದರು, ಮತ್ತೆ ಕೆಲವರು ಬೋಟಿಯನ್ನು ಸ್ವಚ್ಛಗೊಳಿಸುತಿದ್ದರು,

ಆದರೆ ಮಾಂಸ ಕತ್ತರಿಸುವ ಪ್ರಕ್ರಿಯೆಯಲ್ಲಿ ಇದ್ದವರು ಆಗುಂಪಿನ ಹಿರಿಯ ಹೇಳಿದಂತೆ ಕತ್ತರಿಸಬೇಕಿತ್ತು. ಆ ಗುಂಪಿನಲ್ಲಿ 20 ಸದಸ್ಯರಿದ್ದರೆ ಒಟ್ಟು ಮಾಂಸವನ್ನು 20 ಭಾಗವಾಗಿ ವಿಂಗಡಿಸಬೇಕಿತ್ತು, ಈ ವಿಂಗಡಣೆಯಲ್ಲಿ ಎಲ್ಲ ಮಾಂಸದ ಭಾಗಗಳು ಒಳಗೊಂಡಿರಬೇಕಿತ್ತು , ಉದಾಹರಣೆಗೆ ಎರಡು ಮೇಕೆ ಇದ್ದರೆ ಎರಡು ಯಕೃತ್ತು (ಲಿವರ್ ) ಅನ್ನು 20 ಸರಿ ಸಮನಾದ ಭಾಗವಾಗಿ ವಿಂಗಡಿಸಬೇಕಿತ್ತು ಇದೆ ರೀತಿ ಎಲ್ಲ ಮೇಕೆಯ ಅಂಗಾಂಗಗಳನ್ನು ಸರಿಸಮನಾಗಿ 20 ಭಾಗವಾಗಿ ವಿಂಗಡಿಸಬೇಕಿತ್ತು. ಇದರಿಂದ ಎಲ್ಲಸದಸ್ಯರಿಗೂ ಮೇಕೆ/ಕುರಿಯ ಎಲ್ಲ ಅಂಗಾಂಗಗಳು ದೊರಕುತಿದ್ದವು.

ಕೆಲವೊಮ್ಮೆ ಈ ವಿಂಗಡಣೆಯಲ್ಲಿ ಮೋಸವಾಗಿದ್ದು ಗುಂಪಿನ ಸದಸ್ಯರಲ್ಲಿ ಜಗಳು ಸರ್ವೇ ಸಮಾನವಾಗಿ ಇದ್ದವು . ಕೊನೆಯಲ್ಲಿ ಈ ರೀತಿ ಮಾಂಸವನ್ನು ವಿಂಗಡಣೆ ಕೊನೆಯಲ್ಲಿ ಸಮಾನವಾಗಿ ತೂಕ ಮಾಡಿ ವಿತರಿಸಲಾಗುತಿತ್ತು .

ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ