ಗುಲಾಬಿ ಹೂವನ್ನು ತೊಳೆದುಕೊಂಡು, ಪಾತ್ರೆಗೆ ಅರ್ಧ ಕಪ್ ನೀರು ಹಾಕಿ, ಗುಲಾಬಿ ದಳ ಹಾಕಿ ಒಲೆಯ ಮೇಲೆ ಕುದಿಸಲು ಇಟ್ಟು, ಒಂದು ಕುದಿ ಬಂದ ಮೇಲೆ ಇಳಿಸಿ ಸೋಸಿಕೊಳ್ಳಬೇಕು. ಮಿಕ್ಸಿ ಜಾರಿಗೆ ಹಾಲು, ಗೋಡಂಬಿ, ಸಕ್ಕರೆ, ಹಾಲಿನ ಪುಡಿ ಹಾಕಿ ಚೆನ್ನಾಗಿ ರುಬ್ಬಿ. ಇದನ್ನು ಫ್ರೀಜರ್‌ನಲ್ಲಿ ಅರ್ಧ ಗಂಟೆ ಇಟ್ಟು ತೆಗೆದು ಗುಲಾಬಿ ನೀರು ಹಾಕಿ ಮತ್ತೆ ಚೆನ್ನಾಗಿ ಬೀಟ್ ಮಾಡಿ, ಕಪ್‌ಗೆ ಹಾಕಿ ಮರದ/ಪ್ಲಾಸ್ಟಿಕ್ ಚಮಚ ಚುಚ್ಚಿ ಫ್ರೀಜರ್‌ನಲ್ಲಿ ಎಂಟು ಗಂಟೆಗಳ ಕಾಲ ಇಟ್ಟು ತೆಗೆಯಿರಿ. ಕುಲ್ಲಿಯನ್ನು ತಣ್ಣೀರಿನಲ್ಲಿ ಒಂದು ನಿಮಿಷ ಇಟ್ಟು ಕಪ್‌ನಿಂದ ತೆಗೆದು ಸವಿಯಿರಿ.