ಗೌರಿಯೆ ಪಾಲಿಸು ಪಾವನ ಮೂರುತಿ
ಅರಿಯುತಲಿ ನೀ ಸಲಹು/
ಪರಿಪರಿ ವಿಧದಲಿ ಭಜಿಪೆನು ದೇವಿ
ಗುರಿಯನು ನೀ ತೋರು//
ಮಂಗಳಾಂಬಿಕೆ ಪಾರ್ವತಿ ತಾಯೆ
ಕಂಗಳಲಿ ನೆಲೆಸು/
ಕಂದನ ರೀತಿಲಿ ಸಲಹುತಲಿ
ಮಂದಗಮನೆ ಹರಸು//
ಮಹಿಮಾನ್ವಿತೆಯೆ ದಿವ್ಯಸ್ವರೂಪಿಣಿ
ಆದಿಪರಾಶಕ್ತಿ ನೀನಮ್ಮ/
ವಿಶ್ವಂಬರೆಯೆ ದುರಿತ ನಿವಾರಿಸು
ಭವಭಯಹಾರಿಣಿ ತಾಯೆ//
ಶ್ರೀಚಕ್ರಧಾರಿಣಿ ಭುವನಮೋಹಿನಿ
ಪರಮೇಶನ ಹೃದಯವೇಣಿ/
ವಿಧವಿಧ ಹೂಗಳ ಅರ್ಪಿಸುತ
ಪೂಜಿಪೆ ಪ್ರಾರ್ಥಿಪೆ ಗೌರಿ//
ಪತಿತಪಾವನಿ ಜಗಜ್ಜನನಿ
ಅಪರ್ಣೆ ಒಲಿದು ಬಾರೆ/
ಭಕ್ತಳ ಮೊರೆಯ ನೀ ಆಲಿಸುತ
ಶಕ್ತಳಾಗಿ ಮಾಡಿ ಕೃಪೆಯ ದೋರೆ//
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!