ಕಳೆದ ಕೆಲವು ವಾರಗಳಿಂದ ನೀವು ‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಆಯ್ದ ಕವಿಯ ಕವನವನ್ನು ಓದುತ್ತಾ ಬಂದಿರುವಿರಿ. ಈ ವಾರದಿಂದ ಜಾನಪದ ಗೀತೆಗಳನ್ನು ವಿವಿಧ ಮೂಲಗಳಿಂದ ಆಯ್ದು ಪ್ರಕಟಿಸುತ್ತೇವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜಾನಪದ ಗೀತೆಗಳಿರಬಹುದು, ಭಾಷಾ ವೈವಿಧ್ಯತೆಗಳಿರಬಹುದು. ಆದರೆ ಜಾನಪದ ಗೀತೆಗಳ ಸೊಗಡೇ ಬೇರೆ. ಅದು ಹೃದಯಕ್ಕೆ ಹತ್ತಿರವಾದ ಭಾಷೆ. ಈ ವಾರ ‘ತಲಿಮ್ಯಾಲ ಬುಟ್ಟಿ’ಎಂಬ ಕವನವನ್ನು ಆಯ್ದು ಪ್ರಕಟಿಸಲಿರುವೆ.

ತಲಿಮ್ಯಾಲಿ ಬುಟ್ಟಿ

ತಲೆಮ್ಯಾಲೆ ಬುಟ್ಟಿ ಹೊತ್ತಕೊಂಡ ಹುಡುಗಿ

ಯಾವೂರಿಗೆ ಹೊಂಟಿ ಹೇಳು ಅದರಾಗೇನೈತಿ ।

ಬುಟ್ಟಿ ಒಳಗಿನ ತೋರಸತೀನಿ ಹುಡುಗ

ಗಾಬರಿ ನೀ ಆಗತಿ ಅದರೊಳಗೆ ಹಾವೈತಿ !

ಓ… ಚಲುವನು ಕಾಣದ ನೀ ಕಾಣತಿ

ಇದನ್ಯಾಕ ಸೋಗ ಸಿನೆಮಾ ನಟಿ ಹಂಗ ಇದ್ದಂಗ ನೀನು ನಿನ್ನ ಮೂಗ

ಓ.. ಗಾಗರ ಇದ್ದರ ಹಿಂಗ ಗಂಡಿನ ಮೋಹ ತಿಳಿಯುವುದಿಲ್ಲ

ಶೃಂಗಾರ ಆದರೂ ಹುಡುಗರ ಕೆಟ್ಟ ದೃಷ್ಟಿ ಈ ಕಾಲದಾಗ

ಹಾವಗಾರತಿ ಅಲ್ಲನಿ ಹುಡುಗಿ ಬ್ಯಾರೆ ಏನು ಐತಿ

ಅದರ ಒಳಗೆ ಏನು ಐತಿ ॥

ಗಾಳ್ಯಾಗ ದೊಡ್ಡ ಕುಬಸ

ಇಳಕಲ್ಲ ಸೀರಿ ನನ್ನ ಮೆಚ್ಚುಗೆ ಐತಿ

ಸೀರಿ ಉಟ್ಟುಕೊಂಡು ಹೋಗೋದು ಹಳ್ಳಿಯ ಪದ್ಧತಿ ।

ಇಳಕಲ್ಲ ಸೀರಿ ಅಂದ್ರೆ ಕರ್ನಾಟಕದಲ್ಲಿ ಹೆಸರು ಪಡದೈತಿ

ಹೆಸರಾದ ಸೀರಿ ಉಟ್ಟು ನೀ ಹೊರಟ ಅಂದ್ರ, ನಿಂದ ಹೆಸರ

ಸೀರಗೆ ಹೋದ ಮಾರ ನೀನು ಬುಟ್ಟಿಯಾಗೆ ಯಾಕ ಬಿದ್ದಿ

ಅದರೊಳಗ ಹಾವೈತಿ

ವಹಾ ವಹಾ ಭಾರಿ ಹೆಣ್ಣು ಭಾರಿ ಹೆಣ್ಣು ಇರಬೇಕು

ನೋಡಿದವರು ಅಂತಾರು ಭಾರತೀಯ ನಾರಿ ಯಾವತ್ತು ನಿನಗ

ಅಂದಗಾತಿ ಅನ್ನಬಾರದು ನೋಡಿ ಜನರು ಕೆಟ್ಟವ್ವಾ ಅಂದಂಗ

ನೀನೇನು ನಡೆದರೆ ನಾನು ತಂದಿ ತಾಯಿಗೆ ಸಿಟ್ಟು ಬರುವ ಹಾಂಗ

ಸಂತಿಗಿ ಹೊರಟಿನಿ ಬರುವಾಗ ಬುಟ್ಟಿ ತುಂಬಿರತೈತಿ ।

ಬುರುವಾಗ ಬುಟ್ಟಿ ತುಂಬಿರತೈತಿ

ಹೋಗುವಾಗ ಖಾಲಿ ಐತಿ

ನಿಂದ ಮಾತ ಖರೆ ಐತಿ !

(ಸಂಗ್ರಹ)

ಚಿತ್ರ : AI