ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ನಾವು ಆಯ್ದು ಕೊಂಡ ಕವಿತೆ 

ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ

ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಒಣಗ್ಯಾವ ಹೂ ಬಳ್ಳಿ

ಬಿಟ್ಟು ಹೊಂಟ್ಯಲ್ಲಾ ॥ ಏನು ತಿಳಿದಂಗೆ ಹೊಂಟಿಮಳ್ಳಿ

ಏನು ॥ ಗೆಳತಿ ಅಂಗಳ ಬಾರ ಹೊಳ್ಳಿ ನನ್ನ ಅಂಗಳಕ ॥

ನಾನು ಮರೆತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ

ಹುಡುಗಾಟದ ನಿನ್ನ ಚಾಳಿ ಸುಡುಗಾಟದ

ಹಾಡಿ ಆಡಿದ ಆ ಓಕುಳಿ

ಬಿಟ್ಟು ಹೊಂಟೆಲ್ಲ…

ಆ ಆ … ಆ ಆ ಆ … ಆ ಆ

ಹಳ್ಳದ ದಂಡ್ಯಾಗ ಗುಬ್ಬಿಯ ಗೂಡ ಕಟ್ಟಿ ಆಡಿದ್ದು ನೀ ಮರತಿ ಏನು

ಹಕ್ಕರಪಲ್ಲೆ ತಿಂದು ಹರಗ್ಯಾಡಿ ಬಂದಾಗ ಹೊಡಿಸಿಕೊಂಡಿದ್ದು

ಮರತಿ ಏನ ಮನಸ ತುಡಗ ಮಾಡಿದ ಕಳ್ಳಿ

ಮನಸ ತುಡಗ ಮಾಡಿದ ಕಳ್ಳಿ ನನ್ನ ಅಂಗಳಕ ಬಾರ ಹೊಳ್ಳಿ

ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ

ನಮ್ಮ ಜಾತಿ ಮೇಲಂತ ನಿಮ್ಮ ಜಾತಿ ಕೀಳಂತ ಹೇಳತಾನ ನಮ್ಮಪ್ಪ ಕುಂತ

ಸಿಟ್ಟಿಲೇ ಕೈಕಾಲ ಕಟ್ಟಿ ಬಡಿತಾನ ನಿನ್ನ ಪ್ರೀತಿಯ ಮರಿಬೇಕಂತ

ಇರಬೇಕ ಹೆಂಗ ತಾಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ

ಗೋರ್ಯಾಗ ಆಗೋನು ಜೋಡ ಹಿರಿಯಾರ ಹಿರಿತನ

ಕೊಯ್ತತಿ ಕೋಣ ಬಾಳಲ್ಲಿ ಮುಳ್ಳಿನ ಪಯಣ

ನೀ ಇರುವುದು ಹೆಂಗಬಾಳಿ ಭಾರಿ ಬಿಟೈತಿ ಬಿರುಗಾಳಿ

ನಾ ಮರೆತಿಲ್ಲ ನಿನ್ನ ಹಳ್ಳಿ

ಜಗ ಐತಿ ಎಡವಟ್ಟ ಬರಬೇಕು ನಾವ ದಾಟಿ

ಬಾಳೋನು ಪ್ರೀತಿ ಮನಿ ಕಟ್ಟಿ ನಿಲ್ಲೋನು ಎದಿ ತಟ್ಟಿ

ಬಾ ಒಳಗ ಹೊಸ್ತಿಲ ದಾಟಿ ನಾ ಕಟ್ಟಾಕ ತಂದಿನಿ

ನಿನ್ನ ಕೊಳ್ಳಾಗ ಗುಳ ತಾಳಿ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ

ನಾ ಮರೆತಿಲ್ಲ ನಿನ್ನ ಹಳ್ಳಿ

(‘ಜಾನಪದ ಗೀತೆಗಳು’ ಸಂಗ್ರಹ)

AI ಚಿತ್ರ ಕೃಪೆ