ಕಳೆದ ವಾರ ಸಂಪದ ಜಾಲತಾಣದಲ್ಲಿ ಪ್ರಕಟವಾದ “ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ” ಎಂಬ ಜಾನಪದ ಗೀತೆ ಬಹಳಷ್ಟು ಮಂದಿಗೆ ಇಷ್ಟ ಆಗಿದೆ ಎನ್ನುವುದು ಅದನ್ನು ಓದುವವರ ಸಂಖ್ಯೆ ಗಮನಿಸುವಾಗಲೇ ತಿಳಿಯುತ್ತದೆ. ಈ ವಾರ ಮತ್ತೊಂದು ಅಷ್ಟೇ ಸೊಗಸಾದ ಜಾನಪದ ಗೀತೆಯನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇವೆ. ಓದುವ ಖುಷಿ ನಿಮ್ಮದಾಗಲಿ…

ಬಿಡು ಸೆರಗು ಮಾವ

ನೀ ಜಗ್ಗ ಬ್ಯಾಡ ಬಿಡು ಸೆರಗ ಮಾವ

ನೀ ಜಗ್ಗ ಬ್ಯಾಡ ಬಿಡು ಸೆರಗ ಮಾವ

ಏ ಬಿಡಾಕ ಹಿಡಿದಿಲ್ಲ ನಾ ನಿನ್ನ ಸ್ವಾದರ ಮಾವ

ಏ ಬಿಡಾಕ ಹಿಡಿದಿಲ್ಲ ಮಾ ನಿನ್ನ ಸ್ವಾದರ ಮಾವ

ನಾವು ಅದೀವು ಬಾಳ ಬಡವರು

ನಾವು ಅದೀವು ಬಾಳ ಬಡವರು

ತುಟ್ಟ ಈ ತೌರು ಬಿಟ್ಟಾ ಈ ತೌರು

ನೀ ಮನಸಿಗೆ ಹಚ್ಚ ಬ್ಯಾಡ ಬಿಡು ಸೆರಗ ಮಾವ

ಇದ್ದವರು ಇಲ್ಲದವರು ಬ್ಯಾಡ ಈ ಚಿಂತಿ

ಪ್ರೀತಿಗೆ ಅಡ್ಡ ಬರತೈತಿ ನೀತಿ

ಆ ಭಾವನೆ ಇಟ್ಟಿಲ್ಲ ನಾ ನಿನ ಸ್ವಾದರ ಮಾವ

ನೀ ಜಗ್ಗ ಬ್ಯಾಡ । ನೀ ಜಗ್ಗ ಬ್ಯಾಡ

ಏ ಬಿಡಾಕ ಹಿಡಿದಿಲ್ಲ

ಮದವೀಯ ದಿವಸ ಕನ್ಯಾರು ಬರುತಾರು

ನಿನ್ನ ಮುಂದ ಕುಂತ ಚುಚ್ಚಿ ಕದ್ದಾರು

ಬೆಳ್ಳಿ ಬಂಗಾರ ಬಿಡು ಸೆರಗ ಮಾವ

ಬಂಗಾರದಂಥ ಹುಡುಗಿ ನೀ ಇರುವಾಗ ಬಂಗಾರವೆಂಥದ್ದ

ದುಡದ ತರೋದನಾ ನನಗ ಬೇಕಾದಾಗ

ಗಟ್ಟಿ ಐತಿ ಉಡದಾರ ನಾ ನಿನ್ನ ಸ್ವಾದರ ಮಾವ

ಗಟ್ಟಿ ಐತಿ ಉಡದಾರ ನಾ ನಿನ್ನ ಸ್ವಾದರ ಮಾವ

ನಿಮ್ಮ ತಂದೆ ತಾಯಿ ದುಡ್ಡು ಮ್ಯಾಲೆ ಪ್ರಾಣ

ಬೇಡವು ಅವರು ವರದಕ್ಷಿಣಾ

ನಮ್ಮ ಹತ್ತಿರ ಇಲ್ಲ ಹಣ ಬಿಡು ಸೆರಗ ಮಾವ

ವರದಕ್ಷಿಣ ಅನ್ನುತ ಅಲ್ಲೆ ಕುಂದರ್ಲಿ ವರದಕ್ಷಿಣೆ ।

ನನ್ನ ನಿನ್ನ ಡೋಣಿ ಮುಂದಕ ಸಾಗಲಿ

ಬೇಡವ್ರಿಗೆ ಬುದ್ದಿ ಬರ್ಲಿ ನಾವರ ಓಡಿ ಹೋಗೋಣಾ

ಬೇಡವ್ರಿಗೆ ಬುದ್ದಿ ಬರ್ಲಿ ॥

(ಜಾನಪದ ಗೀತೆಗಳು ಕೃತಿಯ ಸಂಗ್ರಹ) AI ಚಿತ್ರ