ಟೀಸರ್ ಬಂದಾಗ ಇದೊಂದು ಶ್ರೀಮಂತ ಸಿನಿಮಾ ಅಂದರು, ಟ್ರೈಲರ್ ಬಂದಾಗ ಇದು ಪಡ್ಡೆ ಹುಡುಗರಿಗೆ ಇಷ್ಟವಾಗೋ ಅಂಥಾದ್ದು ಅಂದರು. ಸಿನಿಮಾ ಬರುವ ಸಮಯದಲ್ಲಿ ಬಂದ ಟ್ರೈಲರ್ ನೋಡಿ ಮುಗೀತು ಇನ್ನು ಈ ಸಿನಿಮಾ ಫ್ಲಾಪ್ ಅಂತ ಹೇಳಿಬಿಟ್ಟರು. ಯಾಕೆ ನಮ್ಮ ಜನ ಹೀಗೆ! ನೋಡುವುದಕ್ಕಿಂತ ಮುಂಚೆನೇ ಅದು ಹೇಗೆ ಕೆಟ್ಟದ್ದು ಅಂತ ನಿರ್ಣಯ ಕೊಟ್ಟುಬಿಡುತ್ತಾರೆ!
ಟ್ರೆಂಡಿಂಗ್ ವಿಷಯದ ಬಗ್ಗೆ ವೀಡಿಯೊ ಮಾಡೋದು ಸಾಮಾನ್ಯ, ಹಾಗೆಯೇ ತಮ್ಮ ವಿಡಿಯೋ ಅನ್ನ ಟ್ರೆಂಡ್ ಪ್ರಕಾರ ಮಾಡೋದು ಉಂಟು. ಆದರೆ ಟಾಕ್ಸಿಕ್ ವಿಚಾರದಲ್ಲಿ ಅದೇಕೋ ಇದನ್ನ ಕೆಟ್ಟ ಸಿನೆಮಾ ಅಂತ ಮೊದಲೇ ನಿರ್ಧರಿಸಿ ಸಿನಿಮಾ ರಿಲೀಸ್ ಆಗೋ ವರೆಗೆ ಕಾಯುತ್ತಿದ್ದರು ಅನ್ನಿಸುವಷ್ಟು ಪೂರ್ವಾಗ್ರಹ ಪೀಡೆ ಕಾಣಿಸುತ್ತಿದೆ.
ನಾನು ಇನ್ನೂ ಇದನ್ನು ನೋಡಿಲ್ಲ ಆದರೆ ನೋಡಿಯೇ ತೀರಬೇಕು ಅನಿಸುತ್ತಿದೆ. ಒಂದು ಸಿನಿಮಾದಲ್ಲಿ ಗ್ಲಾಮರ್ ಬಹಳ ಇದೆ ಅನ್ನುವುದಾದರೆ ಅದರಲ್ಲೇನು ಹೊಸದು?
ಈ ಹಿಂದೆ ಬಂದ ಟೈಟಾನಿಕ್ ಸಿನಿಮಾ ಚೆನ್ನಾಗಿದೆ ಅಂತ ಇವಾಗಲೂ ಜನ ಹೇಳುತ್ತಾರೆ ಆದರೆ ಅದರಲ್ಲಿ ಬರುವ ಎರಡು ಸೀನ್ ಗಳು ಖಂಡಿತವಾಗಿಯೂ ಕುಟುಂಬದ ಜೊತೆ ನೋಡಲು ಆಗದು!
ಹಿಂಸೆ ಜಾಸ್ತಿ ಅಂದರೆ ಅದೇ ತರಹದ ಎಷ್ಟೋ ಪರಭಾಷಾ ಚಿತ್ರಗಳು ಸೂಪರ್ ಹಿಟ್ ಆಗಿವೆಯಲ್ಲ! ಅನಿಮಲ್, ಅರ್ಜುನ್ ರೆಡ್ಡಿ ಅಂತೆಯೇ ಧುರಂಧರ್ ಅಲ್ಲಿ ಹಿಂಸೆ ಮಿತಿ ಮೀರಿತ್ತು. ರಣಬೀರ್, ರಣವೀರ್ ಮತ್ತೆ ವಿಜಯ್ ದೇವರಕೊಂಡ ಹುಚ್ಚು ಹಿಂಸೆ ತೋರಿಸಿದರೆ ಓಕೆ ಆದರೆ ಕನ್ನಡದಲ್ಲಿ ಅದೆಲ್ಲ ಛೇ ಛೇ ಇರಬಾರದು ಅಲ್ವಾ! ಓಂ ಸಿನೆಮಾದಲ್ಲಿ ಏನಿತ್ತು ಹಾಗಾದರೆ!
ಸಿನಿಮಾ ಒಂದು ದೃಶ್ಯ ಮಾಧ್ಯಮ, ಯಾರು ನೋಡಬಹುದು ಅಂತ CBFC ಅವರು ರೇಟಿಂಗ್ ಕೊಡುತ್ತಾರೆ ಆದರೆ ಅದನ್ನ ನಾವು ನೀವು ನೋಡಬೇಕೆ ಬೇಡವೇ ಅಂತ ನಿರ್ಧರಿಸುವವರು ಯೂಟ್ಯೂಬರ್ ಗಳು ಯಾಕಾಗಬೇಕು!
ನಾನಂತೂ ಥೇಟರ್ ಅಲ್ಲಿ ನೋಡಿ ಬರುತ್ತೇನೆ ಒಳ್ಳೇದಿದ್ದರೆ ಒಳ್ಳೆದು ಇಲ್ಲವಾದರೆ ನನ್ನ ಅನಿಸಿಕೆ ವ್ಯಕ್ತಪಡಿಸುತ್ತೇನೆ. ನೀವೂ ನೋಡಿ ಕನ್ನಡದ ಹುಡುಗ ಮಾಡಿರುವ ಹಾಲಿವುಡ್ ಸಿನಿಮಾ ಇದು. ನೋಡದೇನೆ ಕೆಟ್ಟದು ಅಂತ ನಿರ್ಧರಿಸಬೇಡಿ. ನೋಡುವ ಮನಸಿಲ್ಲವೇ ಹಾಗಾದರೆ ಕಾಮೆಂಟ್ ಮಾಡದೆ ನಿಮ್ಮ ಕೆಲಸ ನೀವು ಮಾಡಿ!
ಪ್ರತಿಕ್ರಿಯೆ (1)
ತುಂಬಾ ಖುಷಿ ಆಯ್ತು, ನೀವು ಹೇಳ್ತಿರೋದು ಸರಿ ಇದೆ. ನಾನು ಸಿನಿಮಾ ನೋಡ್ತೀನಿ ಹೋಗಿ , ಹೌದು " ಇದು ನಮ್ಮ ಕನ್ನಡ ಹುಡುಗನ ಚಿತ್ರ, ನಮ್ಮ ಕನಸು , ನಾವೇ ಉಳಿಸಬೇಕು"