ಹಬೆಯಲ್ಲಿ ಬೇಯಿಸಿ ತಣಿದ ನೆಲ್ಲಿಕಾಯಿಯನ್ನು ತುಂಡು ಮಾಡಿಕೊಳ್ಳಿ. ಸ್ವಚ್ಛಗೊಳಿಸಿದ ಹಸಿಮೆಣಸಿನಕಾಯಿಯನ್ನು ತುಂಡರಿಸಿ. ಬಾಣಲೆಯಲ್ಲಿ ಎಣ್ಣೆ ಕಾದಾಗ ಮೆಂತೆ ಮುಂತಾದವನ್ನು ಹುರಿಯಿರಿ. ಈಗ ಇಂಗು, ನೆಲ್ಲಿಕಾಯಿ, ಹಸಿಮೆಣಸಿನಕಾಯಿ ಸೇರಿಸಿ ಮೂರ್ನಾಲ್ಕು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಕಲ್ಲುಸಕ್ಕರೆಪುಡಿ ಬೆರೆಸಿ ಮೂರ್ನಾಲ್ಕು ನಿಮಿಷ ಮುಚ್ಚಿ ಬೇಯಿಸಿ. ಕಾಳು ಮೆಣಸಿನಪುಡಿ, ಉಪ್ಪುಗಳನ್ನು ಸೇರಿಸಿದರೆ ಉಪ್ಪಿನಕಾಯಿ ಸವಿಯಲು ರೆಡಿ. ಈ ಉಪ್ಪಿನಕಾಯಿಯನ್ನು ದಿಢೀರ್ ಆಗಿ ತಯಾರಿಸಬಹುದು.

-ಲತಾ ಹೆಗಡೆ