ನೆಲ್ಲಿಕಾಯಿಯನ್ನು ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ಬೀಜ ತೆಗೆದು ಶುಂಠಿ ತುರಿ, ಉಪ್ಪಿನೊಡನೆ ನುಣ್ಣಗೆ ರುಬ್ಬಿ. ದಪ್ಪತಳದ ಪಾತ್ರೆಯಲ್ಲಿ ಕಲ್ಲುಸಕ್ಕರೆ ಮತ್ತು ರುಬ್ಬಿದ ನೆಲ್ಲಿಕಾಯಿ ಸೇರಿಸಿ ತಿರುವುತ್ತಿರಿ. ಎರಡು ಚಮಚ ನೀರಲ್ಲಿ ಕರಡಿದ ಕಾರ್ನ್‌ ಫ್ಲೋರ್ ಹಾಕಿ. ನಿಂಬೆರಸ, ತುಪ್ಪ, ಗೋಡಂಬಿ ಸೇರಿಸಿ ಸ್ವಲ್ಪ ಬೇಯಿಸಿದರೆ ಸಾಕು. ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ. ಆರಿದಾಗ ಬೇಕಾದ ಆಕಾರದಲ್ಲಿ ಕತ್ತರಿಸಿ

-ಲತಾ ಹೆಗಡೆ