ನಾನು ಅನೇಕ ಪುಸ್ತಕಗಳನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕುತ್ತಿದ್ದೇನೆ. ಈಗ ನಾನು ನಿವೃತ್ತ ಆಗಿರುವುದರಿಂದ ಮತ್ತು ಹಿರಿಯರೆಲ್ಲ ವಿಧಿವಶರಾಗಿರುವುದರಿಂದ ನಾನು ಸ್ವತಂತ್ರನಾಗಿದ್ದೇನೆ. ಆದಕಾರಣ ಡೌನ್ಲೋಡ್ ಮಾಡಿದ ಪುಸ್ತಕಗಳನ್ನು ಓದುತ್ತಿದ್ದೇನೆ.

ಇನ್ನೇನು ? ನನ್ನ ಕಣ್ಣು ನೆಟ್ಟಗಿರಬೇಕಷ್ಟೇ ಮತ್ತು ನನ್ನ ಆಯುಷ್ಯ ಸಾಕಷ್ಟು ಇರಬೇಕಷ್ಟೆ. ( ಭಗತ್ ಸಿಂಗ್ ನನ್ನು ಗಲ್ಲಿಗೆ ಹಾಕಿದಾಗ ಅವನ ಒಂದು ಪುಸ್ತಕ ಓದುತ್ತಿದ್ದನಂತೆ. ಅವನ ಕೊನೆಯ ದುಃಖ ಏನು ಗೊತ್ತೇ ? ನನಗೆ ಇನ್ನೊಂದು 10 ನಿಮಿಷ ಸಿಕ್ಕಿದ್ದರೆ ಸಾಕಿತ್ತು. ಈ ಪುಸ್ತಕವನ್ನು ಓದಿ ಮುಗಿಸುತ್ತಿದ್ದೆ. ಎಂದು! )

ಹೀಗೆ ಡೌನ್ಲೋಡ್ ಮಾಡಿದ ಪುಸ್ತಕಗಳನ್ನೆಲ್ಲ ಸೈಜಿಗನುಗುಣವಾಗಿ ಹೊಂದಿಸಿಕೊಂಡಿದ್ದೇನೆ. 100 ಪುಟಗಳ ಒಳಗಿನ ಪುಸ್ತಕಗಳು ಕಡೆ ಪಕ್ಷ 500 ಇರುವುದರಿಂದ ಅವುಗಳನ್ನು ತಿರುವಿ ಹಾಕುತ್ತಿ ಇದ್ದೇನೆ. ಹೀಗೆ ಸಿಕ್ಕ ಪುಸ್ತಕವೇ 'ಮುಂದಿನ ದೇವರು'. ಇದನ್ನು 1936ರಲ್ಲಿಯೇ ಮುದ್ರಿಸಿದ್ದಾರೆ. ಇದು ನಿಜವಾಗಿ 30 ಪುಟಗಳಷ್ಟು ಚಿಕ್ಕದು. ಇದನ್ನು ಬರೆದವರು ಕೆ ಕೆ ಶೆಟ್ಟಿ ಎಂಬುವವರು. ದೇವರು ಧರ್ಮದ ವಿರುದ್ಧವಾಗಿ ಮಾತನಾಡಲು ತುಂಬಾ ಧೈರ್ಯ ಬೇಕು. ಅದು ಇವರಲ್ಲಿ ಇದೆ. ಈ ಪುಸ್ತಕದಲ್ಲಿ ದೇವರು ಹಾಗೂ ಧರ್ಮದ ವಿರುದ್ಧವಾಗಿ ತಮ್ಮ ವಿಚಾರವನ್ನು ಹೇಳಿದ್ದಾರೆ.

ನೀವು ಕೂಡ ಇದನ್ನು ಓದಿ ಎಂದಷ್ಟೇ ಹೇಳುತ್ತೇನೆ.