ಇವು ಯಾವ ತಿಂಗಳವು ಎಂದು ನಾನು ಸರಿಯಾಗಿ ನೆನಪಿಟ್ಟುಕೊಂಡಿಲ್ಲ . ಬಹುಶಃ 1956 - 1957 ರವು. archive.org ಯಿಂದ ಇಳಿಸಿಕೊಂಡು ಓದಿದ್ದೇನೆ.

ಒಂದು ಕಸ್ತೂರಿಯಲ್ಲಿ ಓದಿದಂತೆ....

ಅನುಭವವು ಮನುಷ್ಯನಿಗೆ ಒಳ್ಳೆ ಮಾರ್ಗದರ್ಶಕವಲ್ಲ. ಅದನ್ನು ಅನುಸರಿಸುವವರೂ ಕಡಿಮೆ. ಅದರ ಸೀಮೆ ಸಂಕುಚಿತವಾಗಿರುವುದರಿಂದ ಅದರಿಂದ ಹೆಚ್ಚು ಕಲಿಯಲಾಗುವುದಿಲ್ಲ. ಮನುಷ್ಯನಿಗೆ ನಿಜವಾಗಿ ಪಾಠ ಕಲಿಸುವುದು ಅನುಭವವಲ್ಲ, ನಿರೀಕ್ಷಣೆ. ಇತರ ಜನರ ಅನುಭವದ ವಿಶಾಲ ಸಂಪತ್ತನ್ನು ಉಪಯೋಗಿಸಿಕೊಳ್ಳಲು ನಿರೀಕ್ಷಣೆಯೇ ನೆರವಾಗುತ್ತದೆ.

ಯಾವುದೋ ಕಸ್ತೂರಿಯಲ್ಲಿ ಓದಿದಂತೆ....

ಪ್ರಸ್ತುತ ನವಂಬರ ೧ ರಂದು ಭಾರತದ ಎಲ್ಲ ದೇಶೀ ಸಂಸ್ಥಾನಿಕರು ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ಕಳೆದುಕೊಂಡು ಭಾರತದ ಸಾಮಾನ್ಯ ನಾಗರಿಕರ ಮಟ್ಟಕ್ಕೆ ಬರುವರು. ಭಾರತದ ರಾಜಕೀಯ ಇತಿಹಾಸದಲ್ಲಿ ನರೇಂದ್ರರನ್ನು ಕುರಿತ ಸಂಪುಟವು ಮುಚ್ಚಿದಂತಾಯಿತು. ಅದು ಇನ್ನೊಮ್ಮೆ ತೆರೆಯುವ ಸಂಭವವಿಲ್ಲ.

ಈ ಹೇಳಿಕೆಯು ಸುಮಾರು 70 ವರ್ಷಗಳ ನಂತರವೂ ನಿಜವಾಗಿ ಇದೆ. ಅಲ್ಲವೇ?