ಪ್ರಧಾನ ಮಂತ್ರಿಗಳ ಜೊತೆ ಮಾತನಾಡುವಾಗ "ನನ್ನ ಮೇಲೆ ಹಲ್ಲೆಯಾದಾಗ ನಾನು ಹನುಮಾನ ಚಾಲಿಸ ಹೇಳಿದೆ" ಎಂದು ಸ್ಮಿತ್ ಮಚ್ಚರ್ ಹೇಳಿದಾಗ ನನಗೆ ನಂಬಲು ಅಷ್ಟು ಸುಲಭ ಅನಿಸಲಿಲ್ಲ. ಕಷ್ಟ ಬಂದಾಗ ದೇವರ ನಾಮ ನೆನಪಾಗುವದು ಸಾಮಾನ್ಯ ಆದರೆ ಸ್ಮಿತ್ ಜೊತೆ ನಡೆದದ್ದು ಸಾಮಾನ್ಯ ಕಷ್ಟ ಅಲ್ಲ.. ಮಾರಣಾಂತಿಕ ಹಲ್ಲೆ. ಅದು ಹೇಗೆ ಆ ಕೆಲವು ನಿಮಿಷಗಳಲ್ಲಿ ದೇವರ ನೆನಪಾಯಿತು ಅನ್ನೋದೇ ನನಗೆ ಸೋಜಿಗ.
ಸ್ಮಿತ್, ಬೆಂಜಮಿನ್ ನೆತನ್ಯಾಹು ಜೊತೆ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ ವಿಷಯ ಕೇಳಿ ನನಗೆ ಅರ್ಥ ಆಯಿತು. ಅವರ ಸಹ ಚಾಲಕ ದೇವರ ಪ್ರಾರ್ಥನೆ ಮಾಡುತ್ತೇನೆ ಅಂದನಂತೆ. ಮುಖ್ಯ ಪೈಲಟ್ ಆದುದರಿಂದ ಅದಕ್ಕೆ ಪರವಾನಗಿ ಕೊಟ್ಟು ತನ್ನ ಪಾಡಿದೆ ತಾನು ಡ್ರೈವ್ ಮಾಡುವುದನ್ನ ಮುಂದುವರಿಸಿದನಂತೆ. ಪ್ರಾರ್ಥನೆ ಮಾಡುವದನ್ನು ಬೇಕೆಂದೇ ನೋಡಲಿಲ್ಲ ಎಂದು ಅವರು ಹೇಳಿದ್ದಾರೆ, ಏಕೆಂದರೆ ಪ್ರಾರ್ಥನೆ ಒಂದು ವೈಯುಕ್ತಿಕ ವಿಚಾರ.
ಆದರೆ ಅವರ ತಲೆಗೆ ಭಾರಿ ಪೆಟ್ಟದಾಗ ಏನಾಯಿತು ಅಂತ ಅರ್ಥಾಗಲಿಲ್ಲ ಅವರಿಗೆ, ಅಷ್ಟರಲ್ಲೇ ಇನ್ನೊಂದು ಏಟು ಬಿತ್ತು. ಕಣ್ಣು ಮಂಜಾಯಿತು ಏನೂ ಕಾಣದಂತಾಯಿತು. ಹಲ್ಲೆ ಮುಂದುವರೆಯಿತು ಈ ಬಾರಿ ಹರಿತವಾದ ಆಯುಧದಿಂದ. ಕಷ್ಟಪಟ್ಟು ಮೇಲೆದ್ದು ಬಾಗಿಲು ತೆಗೆಯಬೇಕು ಅಂತ ಪ್ರಯತ್ನಿಸಿ ತೆರೆದರಂತೆ. ಆದರೆ ಸಹ ಚಾಲಕ ಮತ್ತೆ ಮುಚ್ಚಿದ.
ಅವರಿಗೆ ಹೊರಗಿನ ಜನರ ಕೂಗು ಕೇಳುತ್ತಿತ್ತಂತೆ, ಏಕೆಂದರೆ ಪ್ಲೇನ್ ಮೂತಿ ಕೆಳಗಾಗಿ ಕೆಳಗೆ ಬೀಳುತ್ತಿದ್ದು ರಭಸವಾಗಿ.
ಹೊರಗಿನಿಂದ ಜನರು ಪಾಸ್ವರ್ಡ್ ಹಾಕಿ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದರು ಆದರೆ ಸಹ ಚಾಲಕ ಅದನ್ನು ವಿಫಲಗೊಳಿಸುತ್ತಿದ್ದ. ಇನ್ನೊಂದು ಕೊನೆಯ ಪ್ರಯತ್ನ ಎಂಬಂತೆ ಎದ್ದು ಬಾಗಿಲ ನಾಬ್ ತೆಗೆದು ಕೆಳಗೆ ಬಿದ್ದರಂತೆ. ಇದೆ ಸಮಯದಲ್ಲಿ ಬಹುಶಃ ಸ್ಮಿತ್ ಹನುಮಾನ್ ಚಾಲಿಸ ಹೇಳಿರಬಹುದು. ಏಕೆಂದರೆ ನನ್ನಿಂದ ಇನ್ನು ಆಗುವದಿಲ್ಲ ಅನಿಸಿದಾಗಲೇ ನಮಗೆ ಶಕ್ತಿ ಕೊಡಲು ದೇವರೊಬ್ಬರಿದ್ದಾರೆ ಎನ್ನುವದು ನೆನಪಾಗುವದು.
ಈ ಬಾರಿ ಐದು ಜನ ಒಳಗೆ ನುಗ್ಗಿ ಸಹ ಚಾಲಕನನ್ನು ಹಿಡಿದು ಪ್ಲೇನ್ ಬೀಳದನೆ ತಡೆದರು. ಅಲ್ಲೇ ಇದ್ದ ಇಬ್ಬರು ಚಾಲಕರು ಪ್ಲೇನ್ ಸಂಭಾಳಿಸಿದರು, ಒಬ್ಬ ಡೆಂಟಿಸ್ಟ್ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರು. ಇದೆಲ್ಲ ಹನುಮಂತನ ಅನುಗ್ರಹವೇ ಹೊರತು ಬೇರೆ ಏನಲ್ಲ. ಆಕಾಶದಲ್ಲಿ ಕೈ ಹಿಡಿದು ರಕ್ಷಿಸಲು ಹನುಮಂತನಲ್ಲೇ ಬೇರೆ ಯಾರಿಗೆ ಸಾಧ್ಯ!
ಸ್ಮಿತ್ ಮೆಚ್ಚಲು ಇನ್ನೊಂದು ಕಾರಣ ಏನೆಂದರೆ ಅವರು ಸಹ ಚಾಲಕನ ಧರ್ಮದ ಬಗ್ಗೆ ಹೇಳಲಿಲ್ಲ, ಕೆಟ್ಟ ಶಬ್ದ ಬಳಸಲಿಲ್ಲ. ಇದು ಕೇವಲ ಒಬ್ಬ ಸನಾತನ ಧರ್ಮದವರಿಗೆ ಮಾತ್ರ ಸಾಧ್ಯ.
ಪ್ರತಿಕ್ರಿಯೆ (1)
ಹೌದು. ಇನ್ನು ನನ್ನಿಂದ ಆಗುವುದಿಲ್ಲ ಎಂದಾಗ ದೇವರ ನೆನಪಾಗುತ್ತದೆ ಎಂಬುದು ನಿಜ. ಆದರೆ ಇದು ಕೂಡ ಆ ಜೀವದ ಸ್ವಭಾವವನ್ನು ಅವಲಂಬಿಸಿದೆ. ರಾಮನ ಬಾಣದಿಂದ ಪೆಟ್ಟು ತಿಂದ ಮಾರೀಚ ಲಕ್ಷ್ಮಣ ಹಾ! ಲಕ್ಷ್ಮಣ ಎಂದು ಕೂಗುತ್ತಾ ಪ್ರಾಣ ಬಿಡುತ್ತಾನೆ. ಎಕೆಂದರೆ ಮರಣ ಸಮಯದಲ್ಲಿಯೂ ಕೇಡು ಬಗೆಯುವ ಸ್ವಭಾವ ಆ ಜೀವನದು.
ಅತಿ ಉತ್ತಮ ಪ್ರತಿಕ್ರಿಯೆ! ಈ ದೃಷ್ಟಿಕೋನ ನನಗೆ ಹೊಳೆಯಲಿಲ್ಲ 🙂