ಅಕ್ಟೋಬರ್ ೨, ಇಂದು ಮಹಾತ್ಮನನ್ನು ನೆನೆಯುವ ದಿನ. ಯಾರು ಮಹಾತ್ಮ? ಯಾರೋ ಹತ್ತು ಜನ ಹೇಳುತ್ತಾರೆ ಎಂದು ಒಬ್ಬನನ್ನು ಮಹಾತ್ಮ ಅನ್ನಲಾಗುವದಿಲ್ಲ. ಅವನ ನಡೆ ನುಡಿ ಮತ್ತು ಆಚರಣೆ ಅವನನ್ನು ಮಹಾತ್ಮನನ್ನಾಗಿಸುತ್ತದೆ.
ಸ್ವಾತಂತ್ರ್ಯ ಚಳುವಳಿ ಸಾಮಾನ್ಯ ಮನುಷ್ಯನನ್ನು ತಲುಪುವುದು ದುಸ್ತರವಾಗಿತ್ತು ಆ ಕಾಲದಲ್ಲಿ. ಬ್ರಿಟಿಷರು ಎಲ್ಲರನ್ನೂ ಏನೂ ತುಳಿಯುತ್ತಿರಲಿಲ್ಲ. ಈ ದೇಶ ನಡೆಸಲು ಅವರಿಗೆ ನಮ್ಮದೇ ಜನರ ಅವಶ್ಯಕತೆ ಇತ್ತು. ಅಧ್ಯಾಪಕರು, ಸಿವಿಲ್ ಸರ್ವೀಸ್, ವಕೀಲಿ ವೃತ್ತಿ ಮತ್ತೆ ಎಂಜಿನಿಯರ್ ಸಹ ಬೇಕಾಗಿದ್ದರು ಅವರಿಗೆ. ಮೆಕಾಲೆ ಪುಣ್ಯದಿಂದ ಎಲ್ಲ ಕಡೆ ಆಂಗ್ಲರು ಸ್ಥಾಪಿಸಿದ ಶಾಲಾ ವ್ಯವಸ್ಥೆ ನಡೆದಿತ್ತು. ಮಿಷನರಿಗಳು ನಮ್ಮ ಜನರನ್ನು ಕ್ರೈಸ್ತ ಮತಕ್ಕೆ ಮತಾಂತರಗೊಳಿಸುತ್ತಿದ್ದರು. ಅದು ಹಾಗೆಯೇ ಮುಂದುವರೆದಿದ್ದರೆ ಬಹುಶಃ ನಮ್ಮ ದೇಶವೂ ಸಿಂಗಾಪುರ ಮುಂತಾದ ದೇಶಗಳಂತೆ ಮುಂದುವರಿಯುತ್ತಿತ್ತು.
ನಮ್ಮ ದೇಶದ ವಿಶೇಷತೆ ಏನಂದರೆ ನಾವು ಸನಾತನ ಧರ್ಮದವರು. ಅಷ್ಟು ಬೇಗ ನಮ್ಮ ತನವನ್ನು ಬಿಡುವವರಲ್ಲ.
ಇಂಥ ಸಮಯದಲ್ಲಿ ಒಬ್ಬ ಪುಣ್ಯವಂತ ಮುಂದೆ ಬಂದ. ಅವರು ಮಾಡಿದ ಕೆಲಸವೆಂದರೆ, ನಮ್ಮ ಸನಾತನ ಧರ್ಮದ ಸಹಾಯ ತೆಗೆದುಕೊಂಡು ಆಂಗ್ಲರ ಬಗ್ಗೆ ನಿಜ ವಿಚಾರ ನಮ್ಮ ಜನಕ್ಕೆ ತಲುಪುವ ಹಾಗೆ ಮಾಡಿದ್ದು. ಸಾರ್ವಜನಿಕ ಗಣೇಶ ಉತ್ಸವ ಮತ್ತು ಶಿವಾಜಿ ಜಯಂತಿ ಇವುಗಳ ಆಚರಣೆಯನ್ನು ಪ್ರಾರಂಭಿಸಿದ್ದು. ಆ ಉತ್ಸವಗಳ ಮಾಧ್ಯಮದಿಂದ, ಲಾವಣಿ ಹಾಡುಗಳಿಂದ ಜನರಲ್ಲಿ ಆತ್ಮ ಸನ್ಮಾನವನ್ನು ಬಡಿದೆಬ್ಬಿಸಿ ಆಂಗ್ಲರು ನಮ್ಮ ಉದ್ಧಾರಕ್ಕಲ್ಲ ಬದಲಾಗಿ ನಮ್ಮನ್ನು ಆಮೂಲಾಗ್ರವಾಗಿ ಬದಲಾಯಿಸಲು ಪ್ರಯತ್ನಿಸುತ್ತಿರುವುದನ್ನು ಜನರಿಗೆ ಮನದಟ್ಟು ಮಾಡಿದರು. ಜೊತೆಗೆ ಭಾರತೀರಿಗೆಂದು ಶಾಲೆಗಳನ್ನು ಪ್ರಾರಂಭಿಸಿದರು.
ಸ್ವಲ್ಪ ವರ್ಷಗಳ ನಂತರ ಇನ್ನೊಬ್ಬ ಮಹಾನುಭಾವ ಬಂದರು. ಅವರು ಹಾಕಿಕೊಟ್ಟ ಪದ್ಧತಿಯೆಂದರೆ, ನಮ್ಮನ್ನು ನಾವು ಯಾವಾಗಲೂ ಬಲಿ ಕೊಡಬೇಕು, ಸತ್ಯಾಗ್ರಹ ಅಸಹಕಾರ ಮುಂತಾದ ಅಸ್ತ್ರಗಳಿಂದ ಆಡಳಿತವನ್ನು ಅತಂತ್ರವಾಗಿಸಬೇಕು ಇತ್ಯಾದಿ ಇತ್ಯಾದಿ.
ಇಂದಿನ ಭಾರತದಲ್ಲಿ ಒಂದು ಕಡೆ ಗಣೇಶ ಉತ್ಸವ ಮತ್ತೆ ಇನ್ನೆಷ್ಟೋ ಉತ್ಸವ ಮಾಡಿ ಲೋಕ ಕಲ್ಯಾಣ ಕಾರ್ಯಗಳೂ ನಡೆದಿವೆ. ಹಾಗೆಯೇ ಜಿರಳೆಗಳ ಹೆಸರಲ್ಲಿ ಪಾರ್ಟಿ ಪ್ರಾರಂಭಿಸಿ ಇಡೀ ದೇಶವನ್ನು ಅತಂತ್ರದ ಹಾದಿಗೆ ತಳ್ಳುವ ಕಾರ್ಯಗಳು ನಡೆದಿವೆ.
ಈ ಎರಡೂ ವೈರುಧ್ಯಗಳಲ್ಲಿ ಯಾವುದನ್ನು ಆರಿಸುತ್ತೀರಿ? ಆಯಾ ವಿಚಾರಗಳ ಹರಿಕಾರರಾದ ಆ ಇಬ್ಬರು ದೊಡ್ಡ ಮನುಷ್ಯರಲ್ಲಿ ಯಾರನ್ನು ಮಹಾತ್ಮ ಅನ್ನುತ್ತೀರಿ ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು!
ಜೈ ಶ್ರೀರಾಮ್, ಹೇ ರಾಮ್
ಪ್ರತಿಕ್ರಿಯೆ (1)
ಬಹಳ ಸುಂದರ ವೀವೇಚನೆ. ನನ್ನ ಅನಿಸಿಕೆ ಎಂದರೆ ಪ್ರತಿ ವ್ಯಕ್ತಿಯಲ್ಲಿ ಗುಣ-ದೋಷಗಳು ಇದ್ದೇ ಇರುತ್ತದೆ. ಹಾಗಾಗೀ ನಾವು ರಾಜಹಂಸ ದಂತೆ ಒಳ್ಳೆಯ ಗುಣಗಳನ್ನು ಹೀರಿಕೊಂಡು ದೋಷಗಳನು ಕಡೆಗಣಿಸಿಬೇಕು. ಹಾಗಾಗಿ ಇಲ್ಲಿ ಉಲ್ಲೆಖೀಸೀದ ಇಬ್ಬರೂ ಮಹನೀಯರ ಗುಣಗಳು ವಿವಿಧ ಸನ್ನಿವೇಶಗಳಲ್ಲಿ ಉಪಯುಕ್ತ.
ಇದನ್ನು ಓದಿ, ಇದು ಗಾಂಧೀಜಿ ಅವರೇ ಬರೆದ ಪುಸ್ತಕಗಳು. ಇದರಲ್ಲಿ ಹಂಸಚೋಷಣೆಯಲ್ಲಿ ಏನಾದರೂ ಹಾಲು ಸಿಕ್ಕರೆ ನನಗೆ ತಿಳಿಸಿ. https://www.gandhiheritageportal.org/the-collected-works-of-mahatma-gandhi