ಶಕ್ತಿ ದೇವತೆ ಶ್ರೀದುರ್ಗಾಮತೆ  

ಭಕ್ತಿಯಲಿ ನಮಿಪರು ಪ್ರಕೃತಿ ದೇವತೆ

ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಲಿ ಬಂದೆಯಮ್ಮ

ನವರಾತ್ರಿ ಮೊದಲ ದಿನದ ಅವತಾರವಮ್ಮ

 

ನಿಸರ್ಗದ ಒಡತಿ ನೀನಂತೆ

ಶುದ್ಧ ರೂಪದ ಅವತಾರವಂತೆ

ವೃಷಭಾರೂಢಳಾಗಿ ತ್ರಿಶೂಲ ಹಿಡಿದು ವಿಜೃಂಭಿಸುವೆಯಂತೆ

ಪಾರ್ವತಿಯೆ ಬಂದು ನಿಂದಿಹಳಂತೆ

ಹಿಮವಂತನ ಸುಂದರ ‌ಸುಕುಮಾರಿಯಂತೆ

ಪರಶಿವನ ಒಲಿಸಿದ ಮಂಗಳೆಯಂತೆ

ಭವಾನಿ ಶಂಕರಿ ಶಾಂಭವಿಯಂತೆ

ನವರಾತ್ರಿಯಲಿ ಮೆರೆವ ಮಹಾಮಾತೆಯಂತೆ

ಶೈಲಪುತ್ರಿಯೇ ಯಶಸ್ಸನ್ನು ನೀಡು

ಮೊರೆ ಹೊಕ್ಕೆವು ಮಾತೆ ಕಾಪಾಡು

ಕೆಟ್ಟ ಕಾಮನೆಗಳ ಇಲ್ಲವಾಗಿಸು

ಕಷ್ಟಗಳ ಸುಟ್ಟುರುಹಿ ಕೈಪಿಡಿದು ರಕ್ಷಿಸು

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ