ಮಾಕಿ ಹಬ್ಬ ಇದು ಸಾಮಾನ್ಯವಾಗಿ ಮೈಸೂರು ಭಾಗದಲ್ಲಿ ಆಚರಿಸುವ ಹಬ್ಬವಾಗಿದೆ ಮತ್ತು ಬೇರೆ ಪ್ರಾಂತ್ಯಗಳಲ್ಲಿ ಆಚರಿಸುವ ಬಗ್ಗೆ ನನ್ನ ಬಳಿ ಮಾಹಿತಿ ಇರುವುದಿಲ್ಲ.
ಈ ಹಬ್ಬವನ್ನು ಎರಡನೇ ಅಥವಾ ಮೂರನೇ ಶ್ರಾವಣದ ಸಮಯದಲ್ಲಿ ಆಚರಿಸಲಾಗುತ್ತದೆ. ಜಾಸ್ತಿಯಾಗಿ ಕುರುಬ ಸಮುದಾಯ ಮತ್ತು ಕೆಲವು ಒಕ್ಕಲಿಗ ಪಂಗಡದ ಜನರು ಈ ಹಬ್ಬವನ್ನು ಸಾಂಪ್ರದಾಯಕವಾಗಿ ಆಚರಿಸುವುದು ತಿಳಿದು ಬರುತ್ತದೆ.
ಆಚಾರ ವಿಚಾರಗಳು ಮಹಾಲಯ ಅಮಾವಾಸೆಯ ಆಚರೆಣೆಯಂತೆಯೇ ಕಂಡುಬರುತ್ತದೆ , ಈ ಹಬ್ಬದಲ್ಲಿಯೂ ನಮ್ಮ ಹಿರಿಯರಿಗೆ ಎಡೆ ಇಡುವುದು ಸರ್ವೇ ಸಮಾನ್ಯ, ಆದರೆ ವಿಶೇಷ ಏನೆಂದರೆ ಅದೇ ಈ "ಮಾಕಿ ಕಲ್ಲು"
ಮಾಕಿ ಕಲ್ಲು ಎಂದರೆ ಏನು ?
ಪ್ರತಿ ಮನೆಯಲ್ಲಿಯೂ ಯಾರಾದ್ರೂ ಕೊನೆ ಉಸಿರೆಳೆದರೆ ಅವರ ಹನ್ನೊಂದನೇ ದಿನದ ಕಾರ್ಯದ ನಂತರ ಅವರನ್ನು ಕಲ್ಲಿನಲ್ಲಿ ಪ್ರತಿಷ್ಠಾಪಿಸಿ ಪ್ರತಿ ವರ್ಷವೂ ಅವರಿಗೆ (ಮಾಕಿ ಕಲ್ಲಿಗೆ ) ಎಡೆ ಇಡುವುದು ರೂಢಿಯಲ್ಲಿದೆ.
ಆದರೆ ಇಲ್ಲಿ ಸ್ವಲ್ಪ ವಿಧಿ ವಿಧಾನಗಳು ಇವೆ, ಗಂಡ ಸತ್ತಾಗ ಆತನ ಹೆಂಡತಿಯನ್ನು ಸಹ ಈ ಕಲ್ಲಿನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ .(ಹೆಂಡತಿ ಜೀವಂತ ಇದ್ದರು ಸಹ )
ಮತ್ತು ತದ ನಂತರ ಹೆಂಡತಿ ಸತ್ತಾಗ ಮತ್ತೊಮ್ಮೆ ಪ್ರತಿಷ್ಠಾಪಿಸುವ ಅಗತ್ಯ ಇರುವುದಿಲ್ಲ. ( ಇದೆ ತರಹ ಹೆಂಡತಿ ಸತ್ತಾಗ ಜೀವಂತ ಗಂಡನ್ನನ್ನು ಕಲ್ಲಿನಲ್ಲಿ ಪ್ರತಿಷ್ಠಾಪಿಸುತ್ತಾರೆ )
ಮುಂದುವರಿಯುತ್ತದೆ ................
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!