ಮಾವಿನಕಾಯಿ ಸಿಪ್ಪೆ ಸಮೇತ ದೊಡ್ಡ ದೊಡ್ಡ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಮೆಣಸಿನಕಾಯಿ ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಹಾಕಿ ಹುರಿಯಿರಿ. ಇದನ್ನು ಮಿಕ್ಸಿಗೆ ಹಾಕಿ ತೆಂಗಿನ ತುರಿಯೊಂದಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಡಿ. ಈಗ ಒಂದು ಬಾಣಲೆಗೆ ಉಳಿದ ಎಣ್ಣೆಯನ್ನು ಹಾಕಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಹಾಕಿ. ಇದಕ್ಕೆ ಮಾವಿನಕಾಯಿಯ ಹೋಳುಗಳನ್ನು ಹಾಕಿ ಸ್ವಲ್ಪ ನೀರು ಚಿಮುಕಿಸಿ, ಬೇಯಲು ಬಿಡಿ. ನಂತರ ಉಪ್ಪು, ಬೆಲ್ಲ ಅರಿಶಿನ ಸೇರಿಸಿ ಕೈಯಾಡಿಸಿ. ಬೆಂದ ಮಿಶ್ರಣಕ್ಕೆ ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನೀರನ್ನು ಸೇರಿಸುವುದು ಬೇಡ.
-ಪುಷ್ಪ ಎನ್ ಕೆ ರಾವ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!