ಮೆಂತ್ಯ ಸೊಪ್ಪನ್ನು ಸ್ವಚ್ಛಗೊಳಿಸಿ ಹೆಚ್ಚಿಕೊಳ್ಳಿರಿ. ತೊಗರಿಬೇಳೆಯನ್ನು ಅರ್ಧಗಂಟೆ ನೆನೆಸಿಕೊಂಡು ನೀರು ಬಾಗಿಸಿ, ಕಾಯಿ, ಹಸಿಮೆಣಸು, ಇಂಗು, ಸೇರಿಸಿ ರುಬ್ಬಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಅರಿಶಿನ ಪುಡಿ ಹಾಕಿ ಬೆಂದ ಮೇಲೆ ಹೆಚ್ಚಿದ ಸೊಪ್ಪು ಹಾಕಿ. ಇದಕ್ಕೆ ಉಪ್ಪು, ಹುಳಿ ಸೇರಿಸಿ ಬೆಂದ ಮೇಲೆ ರುಬ್ಬಿಕೊಂಡ ಪದಾರ್ಥ ಹಾಕಿ, ಬೇಕಷ್ಟೇ ನೀರು ಸೇರಿಸಿ ಕುದಿಸಿ ಕೆಳಗಿಳಿಸಿರಿ.

-ಅರ್ಚನಾ ಜಿ. ಬೊಮ್ನಳ್ಳಿ