ಯಾರೂ ಕಾಣುವುದಿಲ್ಲ…

ಯಾರೂ ಕಾಣುವುದಿಲ್ಲ…

ಎಲ್ಲೆಡೆ ನೋಡಿದರೂ

ಯಾರೂ ಕಾಣುವುದಿಲ್ಲ…! ಕಣ್ಣು ತೆರೆದು ನೋಡಿದೆ,

ಕಿಟಕಿಯಾಚೆ ನೋಡಿದೆ,

ಬೀದಿಯುದ್ದಕ್ಕೂ ಹುಡುಕಿದೆ,

ಆದರೂ ಯಾರೂ ಕಾಣುವುದಿಲ್ಲ!“ಎಲ್ಲಿ ಹೋದಿರಿ?” ಎಂದು ಕೂಗಿದೆ,

ಮತ್ತೆ ಮತ್ತೆ ಕರೆದಿದೆ,

ಉತ್ತರ ಮಾತ್ರ ಗಾಳಿಯಂತೆ…

ಯಾರೂ ಕಾಣುವುದಿಲ್ಲ! ಒಬ್ಬರು ಬಂದರೆ ಚೆನ್ನಾಗಿತ್ತು,

ಎರಡು ಮಾತು ಆಡಬಹುದಿತ್ತು,

ಸ್ನೇಹದ ನಗು ಹಂಚಿಕೊಳ್ಳಬಹುದಿತ್ತು…

ಆದರೆ ಇಲ್ಲಿ ನೋಡಿದರೆ—

ಯಾರೂ ಕಾಣುವುದಿಲ್ಲ… ಯಾರೂ ಕಾಣುವುದಿಲ್ಲ!

ಜೀವಿ