ಹೆಸರುಬೇಳೆಯನ್ನು ಒಂದು ಗಂಟೆ ನೆನೆಸಿಕೊಂಡು ನೀರು ಬಸಿದು ಅದಕ್ಕೆ ತೆಂಗಿನ ಕಾಯಿತುರಿ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಹಣ್ಣು, ನಿಂಬೆರಸ, ಉಪ್ಪು ಹಾಕಿ ಕಲಸಿ. ಒಗ್ಗರಣೆ ಸೌಟು ಒಲೆಯ ಮೇಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈ ರುಚಿಕರವಾದ ಕೋಸಂಬರಿ ಆರೋಗ್ಯಕ್ಕೆ ಒಳ್ಳೆಯದು.
-ಪ್ರಭಾ ಪಿ.ಶಾಸ್ತ್ರಿ

ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!