ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು
ಶ್ರೇಷ್ಠ ಅಧ್ಯಾಪನ ಅಧ್ಯಾಪಕರು
ತಾನು ಜನಿಸಿದ ದಿನವನು
ಶಿಕ್ಷಕರ ದಿನವೆಂದು ಸಾರಿದರು
ಮಹಾ ತತ್ವಜ್ಞಾನಿ ದಾರ್ಶನಿಕರು
ಆದರ್ಶ ಶಿಕ್ಷಕರಾಗಿ ಬೆಳಕ ತೋರಿದರು
ಭಗವದ್ ಪಾದ ಆದಿ ಶಂಕರರ
ಬ್ರಹ್ಮ ಆತ್ಮ ತತ್ವದ ಪ್ರತಿಪಾದಕರು
ಸತ್ ಚಿತ್ ಆನಂದ ಬದುಕಿಗೆ
ಸದಾ ಓದಿ ತಿಳಿದ ಘನವಂತರು
ವೇದಾಂತ ನೀತಿಸಾರ ಅರಿತವರು
ಧರ್ಮದ ನೆಲೆಗಟ್ಟ ಬಲ್ಲವರು
ಸಂಯಮ ನಡೆನುಡಿ ಸಮಯಪಾಲನೆ
ಶಿಸ್ತೇ ಜೀವನದ ಬುನಾದಿ ಎಂದಿರಿ
ಭಾರತದ ಸಂಸ್ಕೃತಿಯ ಚಿಂತನವ
ಪಾಶ್ಚಾತ್ಯರಲ್ಲೂ ತುಂಬಿ ಪರಿವರ್ತಿಸಿದಿರಿ
ಉಪರಾಷ್ಟ್ರಪತಿ ರಾಷ್ಟ್ರಪತಿ ಹುದ್ದೆಯಲಂಕರಿಸಿದಿರಿ
ಸ್ವಾಮಿ ವಿವೇಕಾನಂದ ಅರವಿಂದ
ರಾಮಕೃಷ್ಣ ಪರಮಹಂಸರ ಪ್ರಭಾವ
ಸೆಳೆದು ಉತ್ತುಂಗ ಸ್ಥಾನ ಪಡೆದಿರಿ
ನೂರಾರು ಹೊತ್ತಗೆಗಳ ಬರೆದಿರಿ
ವಯೋವೃದ್ಧರು ನಿರ್ಗತಿಕರಿಗೆ
ಆಸರೆಯಾಗಿ ಸಹಕರಿಸಿ ಧೀಮಂತರಾದಿರಿ
ಗುರು-ಶಿಷ್ಯ ಪರಂಪರೆಗೆ ಸಾಕ್ಷಿಯಾದಿರಿ
ಸತ್ಯ ಸತ್ವ ತತ್ವದಡಿ ಶಿಕ್ಷಣವಿರಲಿ
ಪ್ರಾಪಂಚಿಕ ಚಿಂತನ-ಮಂಥನವಿರಲಿ
ಸಮನ್ವಯ ಹರಿಕಾರರಾಗಿ ದುಡಿದಿರಿ
ಜೀವನ ಮೌಲ್ಯಗಳ ಹೃದಯದಲಿ ಬಿತ್ತಿದಿರಿ
ಶಾಲೆ ಶಾಲೆಗಳಲಿ ಹಬ್ಬವಿಂದು
ಮಕ್ಕಳಿಗೆ ಸಂಭ್ರಮದ ದಿನವಿಂದು
ಗುರು ವೃಂದಕೆ ಗೌರವ ಸಲ್ಲಿಸುವರಿಂದು
ದೇವ ರಕ್ಷಿಸು ವಿದ್ಯಾರ್ಥಿಗಳನೆಂದು
ವಿಶ್ವಮಾನ್ಯ ಜಗಜ್ಯೋತಿಯಾದ ಪ್ರಾಚಾರ್ಯ
ಭಾರತದ ಅಪ್ರತಿಮ ಆಚಾರ್ಯ
ಜನುಮ ದಿನದಿ ಶಿಕ್ಷಕರ ನೆನಹು
ಭಾರತರತ್ನಕ್ಕೊಂದು ನಮನ ನಮನ
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!