ಕಲಿಯೋಣ ನಾವು ಕಲಿಯೋಣ
ಅ ಆ ಇ ಈ ಓದೋಣ
ಬರೆಯೋಣ ನಾವು ಬರೆಯೋಣ
ಅಕ್ಷರ ತಿದ್ದಿ ಬರೆಯೋಣ
ವಯಸ್ಸಿನ ಮಿತಿಯು ಇದಕಿಲ್ಲ
ಯಾರದೇ ಹಂಗು ಬೇಕಿಲ್ಲ
ಎಲ್ಲರು ಒಂದೆಡೆ ಸೇರುತಲಿ
ಓದಿ ಬರೆದು ಕಲಿಯುತಲಿ
ಮನೆಯಲೆ ಕುಳಿತು ಹರಟುತಲಿ
ಮಕ್ಕಳ ಜೊತೆಯಲಿ ಸೇರುತಲಿ
ಅಜ್ಞಾನ ಕತ್ತಲೆ ಅಳಿಸೋಣ
ಜ್ಞಾನದ ಬೆಳಕ ಮೂಡಿಸೋಣ
ಹೆಬ್ಬೆಟ್ಟು ಬೇಡ ಎನ್ನೋಣ
ರುಜುವನು ಹಾಕುತ ನಲಿಯೋಣ
ಪುಸ್ತಕವೆಂದರೆ ಗೆಳೆಯನ ಹಾಗೆ
ಮಸ್ತಕದಲ್ಲಿ ತುಂಬುತ ಬಾಗೆ
ಕಲಿವಿನ ಮಹತ್ವ ಸಾರೋಣ
ಸಂಕಲ್ಪ ಸಾಧನೆ ಮಾಡೋಣ
ಪ್ರಗತಿಯ ಹೆಜ್ಜೆಯ ಊರೋಣ
ಅಕ್ಷರ ಜ್ಯೋತಿಯ ಬೆಳಗೋಣ
ಅಭಿವೃದ್ಧಿ ಪಥದಲಿ ಇರುವುದು ಗೆಲುವು
ಮೋಸ ವಂಚನೆ ತಡೆದರೆ ಬಲವು
ಸಾಕ್ಷರ ದೀವಿಗೆ ಹಚ್ಚೋಣ
ಮನೆ ಮನದಲ್ಲೂ ಬೆಳಗೋಣ
-ರತ್ನಾ ಕೆ ಭಟ್ಟ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!