ಅಲ್ಲಿದ್ದ ಬೀದಿ ಬದಿಯ ನಾಯಿಗಳಿಗೂ ಒಂದು ಆಸೆ ಇತ್ತು. ಮನೆಗಳ ಸುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೂ ಒಂದು ಆಸೆ ಇತ್ತು. ಕೊಟ್ಟಿಗೆಯಲ್ಲಿದ್ದ ಗೋವುಗಳಿಗೂ ಒಂದು ಆಸೆ ಇತ್ತು. ಎಲ್ಲರಿಗೂ ಒಂದೇ ಆಸೆ ತಮಗೊಂದು ಹೆಸರು ಬೇಕು. ಆ ಹೆಸರನ್ನು ಯಾರಾದರೂ ಕರೆಯಬೇಕು. ಕರೆಯುವಾಗ ತಾವು ತಿರುಗಿ ನೋಡಬೇಕು. ತಾವು ಈ ಜಗತ್ತಿನಲ್ಲಿ ಇದ್ದೇವೆ ಎಂಬುದಕ್ಕೆ ಒಂದು ಗುರುತು ಬೇಕು. ಹುಟ್ಟಿದ ಮೇಲೆ ಬದುಕಿಗೆ ಒಂದು ಹೆಸರು ಬೇಕು.ಹೆಸರಿನ ಮೂಲಕ ಒಂದು ಗುರುತು ಬೇಕು.ಆದರೆ ಬದುಕು ಸಾಗುತ್ತಾ ಹೋದಂತೆ, ಎಲ್ಲರೂ ನಮ್ಮನ್ನು ಯಾವುದೋ ಒಂದು ಹೆಸರಿನಿಂದ ಕರೆಯಲು ಶುರು ಮಾಡುತ್ತಾರೆ. ಆದರೂ ಮನಸ್ಸಿನೊಳಗೆ ಒಂದು ಪ್ರಶ್ನೆ ಉಳಿಯುತ್ತದೆ
“ನನ್ನನ್ನು ಕರೆಯಲು ಒಂದು ಹೆಸರು ಸಿಕ್ಕಿತು…ಆದರೆ ನನ್ನ ಬದುಕನ್ನು ಕರೆಯಲು ಒಂದು ಅರ್ಥ ಸಿಕ್ಕಿದೆಯೇ?” ಇನ್ನೂ ಕೆಲವರು ಆ ಹೆಸರನ್ನೇ ಹುಡುಕುತ್ತಿದ್ದಾರೆ. ತಮ್ಮ ಬದುಕಿಗೆ ಒಂದು ಅರ್ಥ ಸಿಗಲಿ ಎಂದು. ತಮ್ಮ ಅಸ್ತಿತ್ವಕ್ಕೆ ಒಂದು ಕಾರಣ ಸಿಗಲಿ ಎಂದು. ತಾವು ಬದುಕಿದ್ದೆವು ಎನ್ನುವುದಕ್ಕಿಂತ,ನಾವು ಬದುಕಿದ್ದು ಸಾರ್ಥಕವಾಗಿತ್ತು” ಎಂದು ಹೇಳುವಂತಹ ಒಂದು ಹೆಸರಿಗಾಗಿ ಕಾಯುತ್ತಿವೆ ಎಲ್ಲವೂ ಈಗಲೂ ಕೂಡಾ ಹೆಸರಿಗಾಗಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!