ಒಂದು ಸ್ಪರ್ಧೆಗೆ ಒಂದು ತಂಡ ಸಿದ್ಧವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಿರ್ದೇಶಕರು ಬರಲಾಗದ ಪರಿಸ್ಥಿತಿ ಎದುರಾಯಿತು. ಆಗ ಉದಯನಿಗೆ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಅವನು ಆ ಅವಕಾಶವನ್ನು ತನ್ನದಾಗಿ ನೋಡಲಿಲ್ಲ. “ಇದು ಭಗವಂತ ನನಗೆ ಕೊಟ್ಟ ಜವಾಬ್ದಾರಿ” ಎಂದುಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದ.

ತಂಡದ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡಿದರು. ಹಿರಿಯರು ಪುಟ್ಟ ಪುಟ್ಟ ತಪ್ಪುಗಳನ್ನು ತಿದ್ದಿದರು. ಎಲ್ಲರ ಪರಿಶ್ರಮವೂ ಒಂದಾಗಿ ಸೇರಿತು. ಕೊನೆಗೆ, ಹಲವು ವರ್ಷಗಳ ನಂತರ ಆ ತಂಡಕ್ಕೆ ಮೊದಲ ಬಹುಮಾನ ದೊರೆಯಿತು.

ಭಗವಂತ ಯಾವ ಕೆಲಸದಲ್ಲಿ ನಮ್ಮನ್ನು ಜೋಡಿಸುತ್ತಾನೆ ಎಂಬುದು ನಮಗೆ ಮೊದಲೇ ತಿಳಿದಿರುವುದಿಲ್ಲ. ಆದರೆ ಆತ ಜೋಡಿಸಿದ ಕೆಲಸದಲ್ಲಿ ಪ್ರಾಮಾಣಿಕವಾಗಿ ಜೊತೆಯಾದರೆ, ನಮ್ಮ ಕೈಗಳ ಮೂಲಕವೂ ಅದ್ಭುತಗಳನ್ನು ಮಾಡಿಸುತ್ತಾನೆ. ಅಂದು ಉದಯ ಬಹುಮಾನವನ್ನು ನೋಡಿ ಸಂತೋಷಪಟ್ಟುದಕ್ಕಿಂತ, ಭಗವಂತನಿಗೆ ಕೈಮುಗಿದು ಒಂದೇ ಮಾತು ಹೇಳಿದ ಭಗವಂತಾ, ಮುಂದೆ ಕೂಡ ನಿನ್ನ ಒಳ್ಳೆಯ ಕೆಲಸಗಳಲ್ಲಿ ನನ್ನನ್ನು ಜೋಡಿಸಿಕೋ. ಅಂತ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ