ಮಗು ಒಂದು ಹೂವನ್ನು ಕಿತ್ತುಕೊಂಡಿತು ತಾಯಿಗೆ ಕೊಡಲು. ತಾಯಿ ಅದನ್ನು ದೇವರ ಪಾದದ ಬಳಿ ಇಟ್ಟಳು, ದೇವರಿಗೆ ಕೊಡಲು. ದೇವರು ಮೌನವಾಗಿದ್ದ, ಹೂವು ಮಾತ್ರ ನಗುತ್ತಿತ್ತು. ಮಗು ಕೇಳಿತು ಅಮ್ಮಾ, ದೇವರಿಗೆ ಹೂವು ಇಷ್ಟವಾಯಿತಾ?”ತಾಯಿ ಹೇಳಿದಳು“ಇಷ್ಟವಾಗದಿದ್ದರೆ, ನಿನ್ನ ಕೈಯಲ್ಲಿ ಅದು ಅರಳುತ್ತಿತ್ತೇ?”ಮಗು ಹೂವನ್ನು ನೋಡಿತು.ಆ ದಿನ ಅದು ದೇವರನ್ನು ಹುಡುಕಲಿಲ್ಲ.
ತನ್ನೊಳಗೆ ಉಳಿದಿದ್ದ ಆ ಒಂದು ಹೂವನ್ನೇ ದೇವರೆಂದು ಕಾಯ್ದುಕೊಂಡಿತು. ಬದುಕು ಹೀಗೆಯೇ ನಾವು ಪ್ರೀತಿಯನ್ನು ಯಾರಿಗೋ ಕೊಡುತ್ತೇವೆ; ಆದರೆ ಅದು ಯಾರ ಬಳಿಯೂ ಉಳಿಯುವುದಿಲ್ಲ. ಕೊಟ್ಟ ಕೈಯಲ್ಲೇ ಅದು ಮೊದಲು ಅರಳಿರುತ್ತದೆ. ಹಾಗಾಗಿ ಭಗವಂತನೂ ಸಂಭ್ರಮದಿಂದ ನಕ್ಕು ಬಿಟ್ಟ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!