ಹಾಗೆ ಚಲಿಸುತ್ತಿದ್ದ ಬಸ್ಸಿನ ಒಳಗೆ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಹಿರಿಯ ಜೀವದಲ್ಲಿ ಬದುಕುವ ಚೈತನ್ಯ ಕಂಡು ನನಗೆ ಒಂದು ಸಲ ನನ್ನ ಮೇಲೆ ನಾಚಿಕೆಯಾಗಿ ಬಿಟ್ಟಿತು. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಾಗುವುದಿಲ್ಲ ಅನ್ನೋದು ಅವರ ನೋಡಿ ಅರ್ಥವಾಗಿತ್ತು ಶಾಲೆಯ ಜಂಜಾಟದಲ್ಲಿ ಸರಕಾರಿ ಹುದ್ದೆಯ ನಡುವೆ ಬದುಕನ್ನ ಅನುಭವಿಸುವುದಕ್ಕೆ ಒಂದಷ್ಟು ಸಮಯ ಸಿಗ್ಲಿಲ್ಲ ಅಂತ ಅನಿಸುತ್ತೆ ಈಗವರು ಜೀವನೋತ್ಸವವನ್ನು ಹೆಚ್ಚಿಸಿಕೊಂಡು ಹೊಸ ಹೊಸ ವಿಷಯವನ್ನು ಕಲಿಯುವುದಕ್ಕೆ ಶುರು ಮಾಡಿದ್ದಾರಂತೆ.
ತಾನು ಕಲಿಯುತ್ತಿದ್ದ ಶಾಸ್ತ್ರೀಯ ನೃತ್ಯವನ್ನು ಊರ ಒಂದಷ್ಟು ಮಕ್ಕಳನ್ನು ಸೇರಿಸಿಕೊಂಡು ಪ್ರೀತಿಯಿಂದ ಹೇಳಿಕೊಡುತ್ತಿದ್ದಾರೆ ತನ್ನ ಗುರುಗಳು ಈಗ ಶುರು ಮಾಡಿದ ಹೊಸ ನೃತ್ಯದ ಅಭ್ಯಾಸ ಕಲಿತುಕೊಳ್ಳಲು ಗಂಟೆಗಟ್ಟಲೆ ಪಯಣ ಮಾಡುತ್ತಾರೆ ಕುಣಿತಾರೆ ಬರಿತಾರೆ ಇನ್ಯಾರಾದರೂ ಹೊಸತನ ಕಲಿಸುವವರಿದ್ದರೆ ಪ್ರೀತಿಯಿಂದ ಅವರ ಮುಂದೆ ಕುಳಿತು ಮಗುವಾಗಿ ಬಿಡುತ್ತಾರೆ. ತನ್ನ ಸುತ್ತಮುತ್ತ ಇರುವ ಎಲ್ಲರನ್ನ ಮಾತಾಡಿಸ್ತಾ ಪ್ರತಿಯೊಬ್ಬರಿಂದಲೂ ಹೊಸತನ ಕಲಿತುಕೊಳ್ಳುತ್ತಾರೆ . ತನ್ನ ಬಳಗವನ್ನ ಹೆಚ್ಚಿಸಿಕೊಳ್ಳುತ್ತಾರೆ ಒಂದು ಗಂಟೆಯ ಪಯಣದಲ್ಲಿ ಸಾವಿರ ವಿಷಯಗಳ ಜೊತೆಗೆ ಹತ್ತು ಜನರ ಪರಿಚಯದ ಬುಟ್ಟಿಯನ್ನು ತಮ್ಮ ಜೋಳಿಗಿಯಲ್ಲಿ ತುಂಬಿಸಿಕೊಂಡು ಹಾಗೆ ಇಳಿದು ಹೊರಟುಬಿಟ್ರು.
ಅವರ ಸಂಪಾದನೆಯನ್ನು ಕಂಡಾಗ ನನ್ನ ದುಡಿಮೆಯ ಹೊರತು ಇನ್ನೇನು ಹೊಸತು ಸಂಪಾದಿಸಬೇಕು ಅನ್ನುವ ಸ್ಫೂರ್ತಿ ಸಿಕ್ಕಿತು ಆ ಹಿರಿಯ ಚೈತನ್ಯವನ್ನು ಮನಸ್ಸಿನೊಳಗೆ ತುಂಬಿಕೊಂಡು ಬದುಕನ್ನ ಇನ್ನಷ್ಟು ಆಸ್ವಾದಿಸುವುದಕ್ಕೆ ಸ್ಪೂರ್ತಿ ಪಡೆದುಕೊಂಡೆ ಮತ್ತೆ ಮತ್ತೆ ಇಂತಹದೇ ಹಿರಿಯರ ಭೇಟಿ ಸಿಗಲೆಂದು ಭಗವಂತನನ್ನ ಪ್ರಾರ್ಥಿಸಿಕೊಂಡೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!