ಊರ ಹೊರಗಿದ್ದ ದೇವರಿಗೆ ಚಿನ್ನದ ಕಿರೀಟ ಮಾಡಿಸಲು ಊರಿನವರೆಲ್ಲ ಹಣ ಕೂಡಿಸಿದರು. ದೇವರ ತಲೆ ಚಿನ್ನದಿಂದ ಹೊಳೆಯಿತು. ಆದರೆ ಅದೇ ಊರಿನ ಕೊನೆಯ ಮನೆಯ ಮಗು ಮೂರು ದಿನಗಳಿಂದ ಹಸಿವಿನಿಂದ ಅಳುತ್ತಿತ್ತು. ಅದನ್ನು ನೋಡಿದ ಊರ ಹಿರಿಯ “ದೇವರಿಗೆ ಕಿರೀಟ ಕೊಟ್ಟಿದ್ದೀರಿ. ಮನುಷ್ಯನೊಳಗಿರುವ ದೇವರಿಗೆ ಅನ್ನ ಯಾವಾಗ ಕೊಡುತ್ತೀರಿ?" ಯಾರೂ ಉತ್ತರಿಸಲಿಲ್ಲ. ಆ ದಿನದಿಂದ ಊರಿನವರು ದೇವರಿಗೆ ಹೂವು ಕೊಡುವ ಮೊದಲು, ಒಬ್ಬ ಹಸಿದವನಿಗೆ ಅನ್ನ ಕೊಡಲು ಶುರುಮಾಡಿದರು. ಆ ದಿನದಿಂದ ದೇವರು ನಕ್ಕರು ಕಿರೀಟವು ಹೊಳೆಯಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ