ಮಕ್ಕಳಿಗಾಗಿ ಹೋರಾಟ” ಎಂದು ಬೀದಿಗಿಳಿದರು.ಘೋಷಣೆಗಳು ಮೊಳಗಿದವು, ಬಾವುಟಗಳು ಹಾರಿದವು, ಭಾಷಣಗಳು ನಡೆದವು. ಮಕ್ಕಳು ದೂರ ನಿಂತು ನೋಡುತ್ತಿದ್ದರು...ತಮ್ಮ ಬದುಕು ಬದಲಾಗಬಹುದೆಂಬ ಪುಟ್ಟ ನಿರೀಕ್ಷೆಯೊಂದಿಗೆ.ಆದರೆ ಪ್ರತಿಭಟನೆ ಮುಗಿಯಿತು. ಕ್ಯಾಮೆರಾಗಳು ಹೋದವು. ಮೈಕ್ ಗಳು ಮೌನವಾದವು. ಮಕ್ಕಳ ನೋವು ಮಾತ್ರ ಹಾಗೆಯೇ ಉಳಿಯಿತು.ನಿನ್ನೆ ಕಣ್ಣೀರಿಟ್ಟಿದ್ದ ಆ ಮಕ್ಕಳು, ಇಂದು ತಮ್ಮ ಕಣ್ಣೀರನ್ನೇ ಒರೆಸಿಕೊಂಡು ಬದುಕಿನ ದಾರಿಯಲ್ಲಿ ಮುಂದೆ ಸಾಗಿದರು.ಅವರ ಕನಸುಗಳಿಗೆ ಯಾರೂ ದೀಪ ಹಚ್ಚಲಿಲ್ಲ. ಅವರ ಭವಿಷ್ಯಕ್ಕೆ ಯಾರೂ ದಾರಿ ತೋರಿಸಲಿಲ್ಲ. ಆದರೆ... ಪಕ್ಷಗಳ ಬಾವುಟಗಳು ಮಾತ್ರ ದಿನದಿಂದ ದಿನಕ್ಕೆ ಇನ್ನಷ್ಟು ಎತ್ತರಕ್ಕೆ ಹಾರಿದವು. ಬಾವುಟಗಳು ಆಕಾಶ ಮುಟ್ಟಿದವು ಆದರೆ ಮಕ್ಕಳ ಬದುಕು ಮಾತ್ರ ನೆಲದಿಂದ ಮೇಲೇಳಲಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!