ಮನೆಯ ಮುಂದೆ ನಿಂತಿದ್ದ ಹಳೆಯ ಮಾವಿನ ಮರಕ್ಕೆ ಅವನು ಪ್ರತಿದಿನ ನೀರು ಹಾಕುತ್ತಿದ್ದ. “ನಾಳೆ ಈ ಮರದ ನೆರಳಲ್ಲಿ ಕುಳಿತುಕೊಳ್ಳಬೇಕು...” ಎಂದು ಹೇಳುತ್ತಿದ್ದ. ಆದರೆ ಮರುದಿನ ಬಂದಾಗ ಅವನಿಗೆ ಕೆಲಸವಿರುತ್ತಿತ್ತು. ಆತ ಪ್ರತೀ ದಿನಾಲೂ ಬಿಡುವಿಲ್ಲದವನಾದ. ಇನ್ನೊಂದು ನಾಳೆಯ ಬದುಕೇ ಅವನನ್ನು ಬೇರೆ ದಾರಿಗೆ ಕರೆದೊಯ್ದಿತ್ತು. ವರ್ಷಗಳು ಕಳೆದುಹೋದವು. ಒಂದು ದಿನ ಅವನು ಮತ್ತೆ ಊರಿಗೆ ಬಂದ. ಮನೆ ಇತ್ತು. ಬಾಗಿಲಿತ್ತು. ಆದರೆ ಅಪ್ಪ ಇರಲಿಲ್ಲ. ಮಾವಿನ ಮರ ಮಾತ್ರ ಇನ್ನೂ ಅಲ್ಲೇ ಇತ್ತು. ಅವನು ಮರದ ಕೆಳಗೆ ಕುಳಿತ. ಗಾಳಿಗೆ ಎಲೆಗಳು ನಿಧಾನವಾಗಿ ಅಲುಗಾಡಿದವು. ಅವನಿಗೆ ಅಪ್ಪನ ಮಾತು ನೆನಪಾಯಿತು. ಮಗಾ... ಮರ ದೊಡ್ಡದಾದ ಮೇಲೆ ಅದರ ನೆರಳನ್ನು ನಾವು ಅನುಭವಿಸುವುದಿಲ್ಲ. ನಮ್ಮ ನಂತರ ಬರುವವರೇ ಅನುಭವಿಸುತ್ತಾರೆ. "ಅವನ ಕಣ್ಣಲ್ಲಿ ನೀರು ತುಂಬಿತು. ತಾನು ಬದುಕಿನುದ್ದಕ್ಕೂ ನಾಳೆಗಾಗಿ ಓಡಿದ್ದೆ, ಆದರೆ ಅಪ್ಪ ಬದುಕಿದ್ದು ಇಂದಿಗಾಗಿ. ಅವನು ಮರದ ಬುಡಕ್ಕೆ ಕೈ ಇಟ್ಟ. ಅಲ್ಲಿ ಮಣ್ಣಿನೊಳಗೆ ತನ್ನ ಬಾಲ್ಯದ ಹೆಜ್ಜೆಗಳ ನೆನಪಾಯಿತು. ಆ ದಿನ ಅರ್ಥವಾಯಿತು, ನಾಳೆಯ ಹೋರಾಟದ ನಡುವೆ ಇಂದನ್ನ ಮರೆಯಬಾರದೆಂದು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ