ನಗರದ ಒಂದು ಮೂಲೆಯಲ್ಲಿ ಒಂದು ವಿಚಿತ್ರವಾದ ಪ್ರವಾಸದ ಘೋಷಣೆ ಹೊರಬಿತ್ತು.ಈ ಪ್ರವಾಸಕ್ಕೆ ಬರುವವರಿಗೆ ಯಾರೂ ಪರಿಚಯ ಇರಬಾರದು."ಅಪರಿಚಿತರ ಜೊತೆ ಪ್ರವಾಸವೇ?'ಆದರೂ, ಏನೋ ಒಂದು ಹೊಸ ಅನುಭವದ ಹುಡುಕಾಟದಲ್ಲಿ ಹಲವರು ಹೆಸರು ನೋಂದಾಯಿಸಿದರು. ಒಬ್ಬರ ಮುಖ ಇನ್ನೊಬ್ಬರಿಗೆ ಹೊಸದು ಹೆಸರು ಗೊತ್ತಿಲ್ಲ. ಊರು ಗೊತ್ತಿಲ್ಲ. ಹಿನ್ನೆಲೆ ಗೊತ್ತಿಲ್ಲ.
ಅಲ್ಲಿಯವರೆಗೆ ಅಪರಿಚಿತರಾಗಿದ್ದವರು, ಆ ದಿನ ತಮ್ಮ ಜೀವನದ ಕೆಲವು ಪುಟಗಳನ್ನು ಒಬ್ಬರ ಮುಂದೆ ಒಬ್ಬರು ತೆರೆದರು. ಆ ರಾತ್ರಿ ಎಲ್ಲರೂ ಒಂದು ವೃತ್ತದಲ್ಲಿ ಕುಳಿತರು. ಬೆಂಕಿಯ ಸುತ್ತ. ಕೈಯಲ್ಲಿ ಹಿಡಿದ ಹಾಳೆಯಲ್ಲಿಒಂದೊಂದಾಗಿ ಪದಗಳು ಮೂಡಿದವು. ಭಯ, ಸೋಮಾರಿತನ, ಕೆಟ್ಟ ಅಭ್ಯಾಸಗಳು, ನಕಾರಾತ್ಮಕ ಚಿಂತನೆಗಳು ನನ್ನಿಂದ ಸಾಧ್ಯವಿಲ್ಲ ಎಂಬ ಭಾವನೆ ಹಿಂದಿನ ನೋವುಗಳು. ಎಲ್ಲರೂ ತಮ್ಮ ಕಾಗದಗಳನ್ನು ಬೆಂಕಿಗೆ ಹಾಕಿದರು. ಕಾಗದಗಳು ಸುಡುತ್ತಿದ್ದವು. ಆ ಬೆಂಕಿಯಲ್ಲಿ ಕಾಗದಗಳಿಗಿಂತ ಹೆಚ್ಚು ಏನೋ ಸುಡುತ್ತಿತ್ತು. ಅವರೊಳಗಿನ ಹಳೆಯ ಬದುಕು. ಅವರ ಬದುಕನ್ನು ಬದಲಾಯಿಸುವ ಬೆಂಕಿ ನಿಮ್ಮೊಳಗೇ ಹೊತ್ತಿಕೊಳ್ಳಬೇಕು. ಅದೇ ಜನ. ಆದರೆ ಹಿಂದಿನ ದಿನದ ಜನರಲ್ಲ. ಒಬ್ಬ ಜೀವನದ ಗುರಿಯನ್ನು ಮತ್ತೊಬ್ಬ ಹೊಸ ದಿನಚರಿ, ಇನ್ನೊಬ್ಬ ಕನಸಿನ ಮೊದಲ ಹೆಜ್ಜೆ ಯಾರೋ ಬರವಣಿಗೆ ಇನ್ಯಾರೋ ವ್ಯವಹಾರ, ಮಗದೊಬ್ಬ ಪ್ರತಿಭೆಗೆ ಯಾರೋ ತನ್ನನ್ನೇ ಕಂಡುಕೊಳ್ಳಲು.ಪ್ರವಾಸ ಮುಗಿಯುವ ಸಮಯ ಬಂತು. ಮೊದಲ ದಿನ ಎಲ್ಲರೂ ಕೇಳಿಕೊಂಡಿದ್ದ ಪ್ರಶ್ನೆ “ಇವರ ಜೊತೆ ಹೇಗೆ ಬೆರೆಯಲಿ?" ಈಗ ಬದಲಾಗಿತ್ತು. ಇವರನ್ನು “ಮತ್ತೆ ಯಾವಾಗ ಭೇಟಿಯಾಗೋಣ?" ಬಸ್ ಹೊರಟಿತು. ಕಿಟಕಿಯಾಚೆ ದಾರಿ ದೂರವಾಗುತ್ತಿತ್ತು. ಆದರೆ ಹೃದಯದಲ್ಲಿ ಹೊಸ ದಾರಿಗಳು ತೆರೆದುಕೊಳ್ಳುತ್ತಿತ್ತು. ಅಪರಿಚಿತರಾಗಿ ಬಂದವರು ಪರಿಚಿತರಾಗಿ ಸ್ನೇಹಿತರಾಗಿ ಪರಸ್ಪರರ ಬದುಕಿನ ಒಂದು ಭಾಗವಾದರು. ಜಗತ್ತಿನಲ್ಲಿ ಯಾರೂ ನಿಜವಾದ ಅಪರಿಚಿತರಲ್ಲ. ಪರಿಚಯವಾಗಲು ಒಂದು ಮಾತು ಸಾಕು. ಬಂಧ ಬೆಳೆಸಲು ಒಂದು ನಂಬಿಕೆ ಸಾಕು ಮತ್ತು ಒಂದು ಒಳ್ಳೆಯ ಭೇಟಿಯೇ ಕೆಲವೊಮ್ಮೆ ಇಡೀ ಬದುಕಿನ ದಿಕ್ಕನ್ನೇ ಬದಲಿಸಬಹುದು. ಅರ್ಥವಾಯಿತು ಅಪರಿಚಿತರಿಗೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!