ಅವಳು ನನ್ನವಳು ನಾನು ತಪ್ಪು ಹೆಜ್ಜೆ ಇಟ್ಟಾಗ ತಿದ್ದುತ್ತಾಳೆ. ಕುಗ್ಗಿದಾಗ ಎತ್ತಿ ನಿಲ್ಲಿಸುತ್ತಾಳೆ. ಕನಸು ಕಂಡಾಗ, ಆ ಕನಸಿಗೆ ಬೆನ್ನೆಲುಬಾಗುತ್ತಾಳೆ. ನನ್ನ ಕನಸುಗಳ ಪಟ್ಟಿಯಲ್ಲಿ ಎಷ್ಟೋ ಆಸೆಗಳಿವೆ. ಆದರೆ ಅವಳ ಆಸೆಗಳು ಮಾತ್ರ ಯಾವಾಗಲೂ ಚಿಕ್ಕದಾಗಿರುತ್ತವೆ. ಬೇಕುಗಳ ಪಟ್ಟಿ ಇರುವುದೇ ಇಲ್ಲ. ಇದ್ದುದರಲ್ಲೇ ಸಂತೋಷಪಡುತ್ತಾಳೆ. ಸಿಕ್ಕಿದ್ದನ್ನು ಪ್ರೀತಿಸುತ್ತಾಳೆ. ನನ್ನ ಕನಸುಗಳು ನನಸಾಗುವುದನ್ನೇ ತನ್ನ ಕನಸಾಗಿಸಿಕೊಂಡಿದ್ದಾಳೆ. ಕೆಲವೊಮ್ಮೆ ಅವಳು ಮಗುವಾಗುತ್ತಾಳೆ. ಜಗಳ ಮಾಡುತ್ತಾಳೆ. ಕೋಪ ಮಾಡಿಕೊಳ್ಳುತ್ತಾಳೆ. ಆದರೆ ಸ್ವಲ್ಪ ಹೊತ್ತಿನ ನಂತರ ಅದೇ ಕಣ್ಣುಗಳಲ್ಲಿ ಮತ್ತೆ ಪ್ರೀತಿ ತುಂಬಿರುತ್ತದೆ. ಅವಳಲ್ಲಿ ಹೆಂಡತಿ. ಸ್ನೇಹಿತೆ. ಗುರು ಜೊತೆಗೆ ನನ್ನನ್ನು ತಿದ್ದುವ ತಾಯಿಯ ಮಮತೆಯೂ ಇದೆ. ನನ್ನ ಕನಸುಗಳಿಗೆ ಜೊತೆಯಾಗುವ ಸಂಗಾತಿಯೂ ಇದ್ದಾಳೆ. ಅವಳು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುವ ಆ ಚಿಕ್ಕಚಿಕ್ಕ ಆಸೆಗಳನ್ನು ಒಂದೊಂದಾಗಿ ನನಸು ಮಾಡಬೇಕು ನಾನು ನನ್ನ ಕನಸುಗಳ ಜೊತೆ ನನ್ನ ಮೇಲೆ ನಂಬಿಕೆ ಇಟ್ಟು ತನ್ನ ಕನಸುಗಳನ್ನು ಮರೆತಿರುವ ಆ ಜೀವದ ಕನಸುಗಳನ್ನು ನನಸು ಮಾಡಲು ಬದುಕುತ್ತಿದ್ದೇನೆ. ಅವಳು ಹೀಗೆಯೇ ಇರಲಿ... ಜೀವನ ಪೂರ್ತಿ. ಅದೇ ಮಗುವಿನಂಥ ಮನಸ್ಸು, ಸರಳತೆ, ಪ್ರೀತಿ,ಕೋಪ ನಗು. ಮತ್ತು...ನನ್ನ ಬದುಕಿನ ಹಿಂದೆ ನಿಂತಿರುವ ಆ ಮೌನವಾದ ಜೀವವಾಗಿ. ಇದೆಲ್ಲವನ್ನ ಅವಳಲ್ಲಿ ಹೇಳಲು ಸಾದ್ಯವಾಗದ್ದಕ್ಕೆ ಪತ್ರ ಬರೆದಿದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!