ಒಲೆಯ ಮುಂದೆ ಸೋಮಯ್ಯ ಮೌನವಾಗಿ ಕುಳಿತಿದ್ದ. ಒಲೆಯ ಮೇಲೆ ಖಾಲಿ ಪಾತ್ರೆ. ಕೆಳಗೆ ಉರಿಯುತ್ತಿದ್ದ ಬೆಂಕಿ.ಬೆಂಕಿ ಉರಿಯುತ್ತಲೇ ಇತ್ತು ಆದರೆ ಪಾತ್ರೆಯೊಳಗೆ ಅನ್ನವಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಕಟ್ಟಿಗೆಗಳು ಸುಟ್ಟು ಬೂದಿಯಾದವು. ಬೆಂಕಿ ಆರಿಹೋಯಿತು ಬೂದಿ ಉಳಿಯಿತು. ಸೋಮಯ್ಯ ಮಾತ್ರ ಅಲ್ಲೇ ಕುಳಿತಿದ್ದ.

ಹೊರಗಿನ ಬೆಂಕಿ ಆರಿತ್ತು, ಆದರೆ ಅವನ ಹೊಟ್ಟೆಯೊಳಗಿನ ಹಸಿವಿನ ಬೆಂಕಿ ಇನ್ನೂ ಉರಿಯುತ್ತಲೇ ಇತ್ತು. ಅವನು ಖಾಲಿ ಪಾತ್ರೆಯನ್ನೇ ನೋಡುತ್ತಾ ಮತ್ತೊಂದು ದಿನದ ಅನ್ನಕ್ಕಾಗಿ ಕಾಯತೊಡಗಿದ. ಆಸೆಯಿಷ್ಟೆ ದೇಹ ಬೂದಿಯಾಗುವುದರ ಒಳಗೆ ಒಂದಿಡಿ ಅನ್ನವಾದರೂ ಹೊಟ್ಟೆಗಿಳಿಯಬೇಕು...ಪ್ರಯತ್ನ ಜಾರಿಯಲ್ಲಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ