ಅವನಿಗೆ ಸಾವು ಎಂದರೇನು ಗೊತ್ತಿರಲಿಲ್ಲ. ಮನೆಯಲ್ಲಿದ್ದ ಅಜ್ಜ, ಅಜ್ಜಿ, ಅಮ್ಮ, ಅಪ್ಪ -ಎಲ್ಲರೂ ಯಾವಾಗಲೂ ತನ್ನ ಜೊತೆಯಲ್ಲೇ ಇರುತ್ತಾರೆ ಎಂದು ಅವನು ನಂಬಿದ್ದ. ಅವನಿಗೆ ಬದುಕು ಎಂದರೆ ನಗು. ಬೆಳಗ್ಗೆ ಎದ್ದು ಓಡುವುದು, ಮಳೆ ಬಂದರೆ ನೆನೆಯುವುದು, ಹಸಿವಾದರೆ ತಿನ್ನುವುದು, ಅಮ್ಮನ ಮಡಿಲಲ್ಲಿ ಮಲಗುವುದು. ಒಂದು ದಿನ ಅಜ್ಜ ಕಾಣಿಸಲಿಲ್ಲ. ಅಜ್ಜ ಎಲ್ಲಿ ಹೋದರು? ”ಮೋಡವಾಗಿದ್ದಾರೆ ಅವನು ಕಿಟಕಿಯಾಚೆ ಆಕಾಶ ನೋಡಿದ. ಮೋಡವಾಗಿದ್ದಾರಾ? ಹಾಗಾದರೆ ಮಳೆ ಬಂದಾಗ ಮತ್ತೆ ನಮ್ಮ ಮನೆಗೆ ಬರುತ್ತಾರಾ? ಯಾರೂ ಉತ್ತರಿಸಲಿಲ್ಲ.ವರ್ಷಗಳು ಕಳೆದವು. ಒಬ್ಬೊಬ್ಬರಾಗಿ ಅವನಿಗೆ ಪ್ರಿಯರಾದವರು ದೂರವಾಗುತ್ತಾ ಹೋದರು. ಪ್ರತಿಸಲವೂ ಅವನು ಆಕಾಶವನ್ನೇ ನೋಡುತ್ತಿದ್ದ.ಮಳೆ ಬಿದ್ದಾಗ “ಅವರು ಮತ್ತೆ ಬಂದಿದ್ದಾರೆ ಅನ್ನಿಸುತ್ತಿತ್ತು.ನೋವು ಎಂದರೇನು ಎಂಬುದನ್ನು ಬದುಕು ಅವನಿಗೆ ಕಲಿಸಿತು.ಕಳೆದುಕೊಳ್ಳುವುದು ಎಂದರೇನು ಎಂಬುದನ್ನೂ ಕಲಿಸಿತು. ಆದರೆ ಆ ನೋವಿನ ಮಧ್ಯೆಯೂ ಬದುಕುವುದನ್ನು ಕಲಿಸಿತು.ಅವನು ದೊಡ್ಡವನಾದ.ಒಂದು ದಿನ ಮಳೆಯ ನಡುವೆ ನಿಂತು ಆಕಾಶ ನೋಡುತ್ತಾ ಸಣ್ಣಗೆ ನಕ್ಕ. ಅವನಿಗೆ ಈಗ ಅರ್ಥವಾಗಿತ್ತು ಕೆಲವರು ನಮ್ಮ ಜೊತೆಯಲ್ಲಿ ಬದುಕುವುದನ್ನು ನಿಲ್ಲಿಸುತ್ತಾರೆ;ಆದರೆ ನಮ್ಮೊಳಗೆ ಬದುಕುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.ಅವರು ಮೋಡಗಳಾಗುತ್ತಾರೆ ಮಳೆಯಾಗಿ ಮರಳುತ್ತಾರೆ ನಮ್ಮ ನೆನಪುಗಳಲ್ಲಿ ಮತ್ತೆ ಮತ್ತೆ ಹುಟ್ಟುತ್ತಾರೆ. ಅದೇ ನಂಬಿಕೆಯಲ್ಲಿ ಬದುಕಿದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!